– ಇನ್‍ಸ್ಟಾ ಖಾತೆಯ ಪ್ರೊಫೈಲ್ ಫೋಟೋ ಬಳಸಿ ಕೃತ್ಯ
– ಇನ್‍ಸ್ಟಾದಲ್ಲೇ ಮೆಸೇಜ್ ಮಾಡಿ ಮಹಿಳೆಯರಿಗೆ ಬೆದರಿಕೆ
ನವದೆಹಲಿ: ನಕಲಿ ಬೆತ್ತಲೆ ಫೋಟೋ ತೋರಿಸಿ ಬರೋಬ್ಬರಿ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ದೆಹಲಿಯ ನಿವಾಸಿ ಸುಮಿತ್ ಝಾ ನಕಲಿ ಬೆತ್ತಲೆ ಫೊಟೋಗಳನ್ನು ಇಟ್ಟುಕೊಂಡು ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಇಂತಹದ್ದೇ ಪ್ರಕರಣದಲ್ಲಿ ಸುಮಿತ್ ಝಾನನ್ನು ಛತ್ತಿಸ್‍ಗಡಲ್ಲಿ ಬಂಧಿಸಲಾಗಿತ್ತು. ಆರೋಪಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಈತ ಮಹಿಳೆಯರ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬೆದರಿಸುತ್ತಿದ್ದ. ಹೀಗೆ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಮೊಬೈಲ್‍ನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಸುಲಿಗೆ, ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ. ನನ್ನ ಇನ್‍ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಹಣ ನೀಡದಿದ್ದರೆ ನಿನ್ನ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
Advertisement
ಮಹಿಳೆಯ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿರುವುದು ಮಾತ್ರವಲ್ಲದೆ ಆಕೆಯ ಖಾತೆಯ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದವರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ದೆಹಲಿಯ ಸೈಬರ್ ಸೆಲ್ ಪೊಲೀಸರು ಈ ಕುರಿತು ವಿಸ್ತೃತ ತನಿಖೆ ಆರಂಭಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇಂಟರ್‍ನೆಟ್ ಕಾಲಿಂಗ್ ಸೌಲಭ್ಯ ಬಳಸಿ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಎಂಬುದು ಈ ವೇಳೆ ತಿಳಿದಿದೆ.
ಸೈಬರ್ ಸೆಲ್ ಪೊಲೀಸರು ಇನ್‍ಸ್ಟಾಗ್ರಾಮ್‍ನಿಂದ ಟೆಕ್ನಿಕಲ್ ವಿವರಗಳು ಹಾಗೂ ಟೆಲಿಕಾಂ ಕಂಪನಿ ನೀಡಿದ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಆರೋಪಿ ಮಹಿಳೆಯರ ಇನ್‍ಸ್ಟಾಗ್ರಾಮ್ ಖಾತೆಯಲ್ಲಿನ ಪ್ರೊಫೈಲ್ ಫೋಟೋ ಬಳಸಿ, ಅವುಗಳನ್ನು ಮಾರ್ಫ್ ಮಾಡಿ, ನಕಲಿ ಪ್ರೊಫೈಲ್ ಫೋಟೋ ಕ್ರಿಯೇಟ್ ಮಾಡುತ್ತಿದ್ದ. ಬಳಿಕ ಇದೇ ಫೋಟೋ ಇಟ್ಟುಕೊಂಡು ಮಹಿಳೆಯರಿಗೆ ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿ ಬಳಿಕ ಮಹಿಳೆಯರಿಗೆ ಮೆಸೇಜ್ ಮಾಡಿ, ನಿಮ್ಮ ಬೆತ್ತಲೆ ಫೋಟೋ ನನ್ನ ಬಳಿ ಇದೆ ಎಂದು ಬೆದರಿಕೆ ಸಂದೇಶ ಕಳುಹಿಸುತ್ತಿದ್ದ. ಅವರು ಪ್ರೂಫ್ ಕೇಳಿದ ಬಳಿಕ ಮಾರ್ಫ್ ಮಾಡಿದ ಫೋಟೋಗಳನ್ನು ಕಳುಹಿಸುತ್ತಿದ್ದ. ಬಳಿಕ ಬೆದರಿಕೆ ಹಾಕುತ್ತಿದ್ದ. ಆರೋಪಿ ಝಾ ಪ್ರಸ್ತುತ ನೋಯ್ಡಾದಲ್ಲಿ ವಾಸಿಸುತ್ತಿದ್ದು, ಪದವೀಧರನಾಗಿದ್ದಾನೆ. ಫೀಶಿಂಗ್ ತಂತ್ರಗಳನ್ನು ಕಲಿತಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.