ದ್ವಿಶತಕ ವಿಶ್ವದಾಖಲೆ ಸಂಭ್ರಮದಲ್ಲಿ ಪತ್ನಿಯ ಕಣ್ಣೀರು- ಕಾರಣ ತಿಳಿಸಿದ ಹಿಟ್‍ಮ್ಯಾನ್

Public TV
2 Min Read
Ritika Sajdeh Rohit Sharma

ಮುಂಬೈ: ಹಿಟ್‍ಮ್ಯಾನ್ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಮೂರನೇ ಬಾರಿ ದ್ವಿಶತಕ ಸಿಡಿಸಿದಾಗ ಅವರ ಪತ್ನಿ ರಿತಿಕಾ ಕಣ್ಣೀರು ಹಾಕಿದ್ದರು. ಆದರೆ ಬಹುದಿನಗಳ ಬಳಿಕ ಯಾಕೆ ಪತ್ನಿ ಕಣ್ಣೀರು ಹಾಕಿದ್ದರು ಎನ್ನುವುದನ್ನ ಬಹಿರಂಗಪಡಿಸಿದ್ದಾರೆ.

2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ರೋಹಿತ್ ಶಮಾ ದ್ವಿಶತಕ ದಾಖಲಿಸಿದರು. ಅವರ ಹೆಸರಿನಲ್ಲಿ ಒಟ್ಟು ಮೂರು ಡಬಲ್ ಸೆಂಚುರಿಗಳು ಸೇರಿಕೊಂಡಿವೆ. ವಾಸ್ತವವಾಗಿ ಅನೇಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಏಕದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಬಾರಿಸಲು ಆಗಿಲ್ಲ.

Rohit

2017ರಲ್ಲಿ ಪತಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೂರನೇ ದ್ವಿಶತಕವನ್ನು ಪೂರ್ಣಗೊಳಿಸಿದ್ದರು. ಆಗ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್‍ದೇವ್ ಅವರು, ಎದ್ದುನಿಂತು ಚಪ್ಪಾಳೆ ತಟ್ಟಿದರು. ಆದರೆ ಕ್ಯಾಮೆರಾ ಅವರ ಕಣ್ಣೀರಿನ ಮೇಲೆ ಹೆಚ್ಚು ಗಮನ ಹರಿಸಿತು.

ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದಂದು ಪತಿ ರೋಹಿತ್ ಶರ್ಮಾ ದೊಡ್ಡ ಉಡುಗೊರೆ ಇದಾಗಿದ್ದು, ಅದಕ್ಕೆ ರಿತಿಕಾ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಅನೇಕರು ಊಹಿಸಿದ್ದಾರೆ. ಆದರೆ ಇತ್ತೀಚೆಗೆ ಮಾಯಾಂಕ್ ಅಗರ್ವಾಲ್ ಅವರೊಂದಿಗಿನ ಲೈವ್ ಚಾಟ್‍ನಲ್ಲಿ, ರಿತಿಕಾ ಅವರ ಭಾವನೆಗಳ ಹಿಂದಿನ ನಿಜವಾದ ಕಾರಣವನ್ನು ರೋಹಿತ್ ಬಹಿರಂಗಪಡಿಸಿದ್ದಾರೆ.

rohith sharma

“ಮೊದಲಿಗೆ, ರಿತಿಕಾ ಅಳುತ್ತಾಳೆಂದು ನನಗೆ ತಿಳಿದಿರಲಿಲ್ಲ. ನೋಡಿ ನನಗೆ ಆಶ್ಚರ್ಯವಾಯಿತು. ಮೈದಾನದಿಂದ ಅವರ ಬಳಿಗೆ ಬಂದು ಯಾಕೆ ಅಳುತ್ತೀರಿ ಎಂದು ಕೇಳಿದೆ. ಆಗ ಉತ್ತರಿಸಿದ ರಿತಿಕಾ, 196 ರನ್ ಗಳಿಸಿದ್ದಾಗ ಕೆಳಗೆ ಬಿದ್ದಿದ್ದೆ. ಆಗ ನನ್ನ ಕೈ ತಿರುಚಿತ್ತು. ಇದರಿಂದಾಗಿ ತುಂಬಾ ಭಾವುಕಳಾಗಿದ್ದಳು” ಎಂದು ರೋಹಿತ್ ಶರ್ಮಾ ಅವರು ಮಾಯಾಂಕ್ ಅವರಿಗೆ ತಿಳಿಸಿದರು.

ಪಂದ್ಯದಲ್ಲಿ ರೋಹಿತ್ ಶರ್ಮಾ 13 ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 208 ರನ್ ಗಳಿಸಿದ್ದರು. ಹಿಟ್‍ಮ್ಯಾನ್ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಭಾರತ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿತ್ತು. ಬಳಿಕ ಭಾರತದ ಬೌಲರ್ ಗಳು ಶ್ರೀಲಂಕಾ ತಂಡವನ್ನು ಕಟ್ಟಿ ಹಾಕಿದರು. ಪರಿಣಾಮ ಲಂಕಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿ 141 ರನ್‍ಗಳ ಅಂತರದಿಂದ ಸೋಲು ಕಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *