ದೊಡ್ಮನೆ ಹುಡುಗ ಬಣ್ಣದಲೋಕಕ್ಕೆ ಬಂದು 45 ವರ್ಷ

Public TV
2 Min Read
Puneeth Rajkumar

ಬೆಂಗಳೂರು: ಬಾಲನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪುಟ್ಟ ಬಾಲಕ ಇಂದು ಎಲ್ಲರ ಪ್ರೀತಿಯ ಪವರ್ ಸ್ಟಾರ್, ಅಪ್ಪು ಆಗಿರುವ ಪುನೀತ್ ರಾಜ್‍ಕುಮಾರ್ ಸಿನಿಮಾರಂಗಕ್ಕೆ ಬಂದು 45 ವರ್ಷ ಪೂರೈಸಿದ್ದಾರೆ.

45 ವರ್ಷಗಳ ಕಾಲ ಮನರಂಜನೆಯನ್ನು ನೀಡುತ್ತಾ ಬಂದಿರುವ ಅಪ್ಪು ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಕಲಾವಿದರು, ಸೆಲೆಬ್ರಿಟಿಗಳು ಶುಭಾಶಯದ ಸುರಿಮಳೆ ಗೈದಿದ್ದಾರೆ. ಶುಭಕೋರಿದ ಎಲ್ಲರಿಗೂ ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. 45 ವರ್ಷದ ಈ ಪಯಣದಲ್ಲಿ ನನ್ನನ್ನು  ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

45 ವರ್ಷ ಅಂದರೆ ಅದು ನಿಮ್ಮ ಇಡೀ ಜೀವನ. ಇದು ದೊಡ್ಡ ಸಾಧನೆ, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸಾಧನೆ ಮಾಡಿ ಎಂದು ಸುದೀಪ್ ಟ್ವೀಟ್ ಮಾಡುವ ಮೂಲಕವಾಗಿ ಶುಭ ಕೋರಿದ್ದಾರೆ.

ನಿಮ್ಮ ಸಿನಿ ಪ್ರಯಾಣದುದ್ದಕ್ಕೂ ನೀವು ನಿಜವಾಗಿಯೂ ಪವರ್ ಸ್ಟಾರ್ ಆಗಿದ್ದೀರಾ. ಕನ್ನಡ ಸಿನಿರಂಗದಲ್ಲಿ 45 ವರ್ಷ ಪೂರೈಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಇನ್ನಷ್ಟು ಯಶಸ್ಸು ನಿಮ್ಮದಾಗಲಿ ಎಂದು ರಕ್ಷಿತ್ ಶೆಟ್ಟಿ ಶುವಕೋರಿದ್ದಾರೆ.

45 ವರ್ಷಗಳ ಸುಂದರ ಪ್ರಯಾಣ. ಅಭಿನಂದನೆಗಳು ಮತ್ತು ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ. ಅಪ್ಪಾ ಜೊತೆ ಸ್ಮರಣೀಯ ಚಿತ್ರ ಎಂದು ಪುನೀತ್ ರಾಜ್‍ಕುಮಾರ್ ಅವರ ತಂದೆಯೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

PUNEETH RAJKUMAR

ಸ್ಯಾಂಡಲ್‍ವುಡ್‍ನಲ್ಲಿ 45 ವರ್ಷ ಪೂರೈಸಿರುವ ಪುನೀತ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಕಾಮನ್ ಡಿಪಿ ಸಹ ರಿಲೀಸ್ ಮಾಡಿದ್ದಾರೆ. ಕನ್ನಡ ಸಿನಿರಂಗದಲ್ಲಿ 45 ವರ್ಷ ಪೂರೈಸಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಕನ್ನಡ ಸಿನಿ ರಂಗದ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *