ಬೆಂಗಳೂರು: ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ದೊಡ್ಮನೆ ಸದಸ್ಯರು ಫಾದರ್ಸ್ ಡೇ ಪ್ರಯುಕ್ತ ತಮ್ಮ ಪ್ರೀತಿಯ ಅಪ್ತಂದಿರಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.
ಹೌದು, ಪ್ರತಿಯೊಬ್ಬ ಮಕ್ಕಳ ಮೊದಲ ಹೀರೋ ಅಂದರೆ ಅದು ಅವರ ತಂದೆ. ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಅವರನ್ನು ಮಕ್ಕಳಂತೆಯೇ ನೋಡುವುದು ಪೋಷಕರು ಮಾತ್ರ. ಮಕ್ಕಳನ್ನು ಪಾಲಿಸಿ, ಪೋಷಿಸಿ, ಬೆಳೆಸುವುದರಲ್ಲಿ ತಾಯಿಯ ಪಾತ್ರ ಎಷ್ಟು ದೊಡ್ಡದಿರುತ್ತದೇಯೋ ಹಾಗೆಯೇ ತಂದೆ ಪಾತ್ರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಎಲ್ಲಾ ಸಂದರ್ಭದಲ್ಲಿ ಸದಾ ಮಕ್ಕಳ ಬೆನ್ನ ಹಿಂದೆ ಬೆಂಬಲವಾಗಿ ಮೊದಲು ನಿಲ್ಲುವುದು ತಂದೆ ಮಾತ್ರ. ಅಂತಹ ವಿಶ್ವ ತಂದೆಯಂದಿರ ದಿನಾಚರಣೆಯಂದು ಬಿಗ್ ಮನೆ ಸ್ಪರ್ಧಿಗಳು ತಮ್ಮ ತಂದೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಪಂಚರಂಗಿ ಬೆಡಗಿ ನಟಿ ನಿಧಿ ಸುಬ್ಬಯ್ಯರವರು, ತಮ್ಮ ತಂದೆ ಜೊತೆಗಿರುವ ಬಾಲ್ಯದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಿಮ್ಮ ಬಗ್ಗೆ ಯೋಚಿಸದೇ ಒಂದು ದಿನವೂ ಕಳೆಯುವುದಿಲ್ಲ. ನೀವು ಇರಬೇಕಿತ್ತು. ನಾನು ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹ್ಯಾಪಿ ಫಾದರ್ಸ್ ಡೇ ಪಪ್ಪಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ವೈಷ್ಣವಿ ಗೌಡ ಕೂಡ ತಮ್ಮ ತಂದೆಯೊಟ್ಟಿಗಿರುವ ಫೋಟೋ ಜೊತೆಗೆ ಹ್ಯಾಪಿ ಫಾದರ್ಸ್ ಡೇ ಅಪ್ಪ, ಎಂದಿಗೂ ನೀವು ನನ್ನ ಸೂಪರ್ ಹೀರೋ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಅರವಿಂದ್ ಕೆಪಿ ಕೂಡ ಬೈಕ್ ಮೇಲೆ ಅವರ ತಂದೆ ಕುಳಿತುಕೊಂಡಿರುವ ಫೋಟೋ ಹಾಕಿ ವಿಶ್ ಮಾಡಿದರೆ, ದಿವ್ಯಾ ಉರುಡುಗ ಕೂಡ ಅವರ ತಂದೆ ಜೊತೆಗಿರುವ ಫೋಟೋ ಜೊತೆಗೆ ಪುಟ್ಟಿಮಗ ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಅಪ್ಪಾಜಿ, ಹ್ಯಾಪಿ ಫಾದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್
View this post on Instagram
View this post on Instagram