ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಕರಾವಳಿಯ ಕುವರಿ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಅವರ 70 ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ಅಜ್ಜಿಯೊಂದಿಗೆ ಸುಂದರವಾದ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾಳೆ.
ವೃಂದಾ ರೈ ಅವರ 70ನೇ ಹುಟ್ಟುಹಬ್ಬವನ್ನು ಐಶ್ವರ್ಯ ರೈ, ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆ ಸೇರಿ ಆಚರಿಸಿದ್ದಾರೆ. ಬಳಿಕ ಈ ಸಂಭ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವ ಮೂಲಕ ಹಂಚಿಕೊಂಡಿರುವ ಐಶ್ವರ್ಯ ರೈ ಪರಿಪೂರ್ಣ ಕುಟುಂಬ ಎಂದು ಬರೆದುಕೊಂಡಿದ್ದಾರೆ.
View this post on Instagram
ಬಳಿಕ ಇನ್ನೊಂದು ಫೋಟೋದಲ್ಲಿ ಆರಾಧ್ಯ ತನ್ನ ಅಜ್ಜಿಯೊಂದಿಗೆ ಮುದ್ದಾದ ಫೋಟೋಗೆ ಪೋಸ್ ನೀಡಿ ಹುಟ್ಟುಹಬ್ಬದ ಶುಭಾಶಯಗಳು ‘ಮಮ್ಮಿ-ದೊಡ್ಡ’ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಲತಃ ಕರಾವಳಿಯವರಾಗಿರುವ ಐಶ್ವರ್ಯ ರೈ ತಾಯಿಯನ್ನು ದೊಡ್ಡ ಎಂದು ಕರೆಯುವ ಮೂಲಕ ಕರಾವಳಿಯ ಮಾತನ್ನು ನೆನಪಿಸಿಕೊಂಡಿದ್ದಾರೆ.
View this post on Instagram
ಈ ಹಿಂದೆ ಐಶ್ವರ್ಯ ರೈ ಅವರು ತನ್ನ ತಂದೆ ಜೊತೆಗಿದ್ದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಐಶ್ವರ್ಯ ರೈ ಅವರ ತಂದೆ ಕೃಷ್ಣರಾಜ್ ರೈ 2017ರಲ್ಲಿ ಮರಣಹೊಂದಿದ್ದರು. ಕಳೆದ ಡಿಸೆಂಬರ್ ನಲ್ಲಿ ತನ್ನ ತಂದೆ, ತಾಯಿಯ ಮದುವೆ ದಿನದಂದು ಕೂಡ ಇದೇ ರೀತಿ ಫೋಟೋ ಒಂದನ್ನು ಹಾಕಿಕೊಂಡು ಐಶ್ವರ್ಯ ರೈ ಶುಭಾಶಯ ಕೊರಿದ್ದರು.