ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್‍ಗಿಂತ ಡೀಸೆಲ್ ದರ ದುಬಾರಿಯಾಗಿ ದಾಖಲೆ ಬರೆದಿದೆ.
ದೆಹಲಿಯಲ್ಲಿ ಸತತ 18ನೇ ದಿನವೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪರಿಣಾಮ ಪೆಟ್ರೋಲ್ ದರ ಹಾಗೆ ಉಳಿದರೆ ಡೀಸೆಲ್ ಬೆಲೆ ದಾಖಲೆಯನ್ನು ಬರೆದಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ದೇಶದ ರಾಜಧಾನಿಯಲ್ಲಿ ಡೀಸೆಲ್‍ಗೆ ಪೆಟ್ರೋಲ್‍ಗಿಂತ ಹೆಚ್ಚಿನ ಬೆಲೆ ನಿಗದಿಯಾಗಿದೆ.
Advertisement
Advertisement
ಡೀಸೆಲ್ ಬೆಲೆಯಲ್ಲಿ ಇಂದು 48 ಪೈಸೆ ಹೆಚ್ಚಿಸಲಾಗಿದೆ. ಹೀಗಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಈಗ 79.88 ರೂ. ಇದ್ದರೆ, ಪ್ರತಿ ಲೀಟರ್ ಪೆಟ್ರೋಲ್‍ಗೆ 79.76 ರೂ. ನಿಗದಿಯಾಗಿದೆ. ಈ ಮೂಲಕ ಪೆಟ್ರೋಲ್‍ಗಿಂತ ಡೀಸೆಲ್ ಬೆಲೆ 12 ಪೈಸೆ ಹೆಚ್ಚಾಗಿದೆ.
Advertisement
ದೆಹಲಿಯಲ್ಲಿ ಕಳೆದ 18 ದಿನಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 8.50 ರೂ. ಹಾಗೂ ಡೀಸೆಲ್ ಬೆಲೆ 10.48 ರೂ. ಹೆಚ್ಚಳವಾಗಿದೆ. ವರದಿಗಳ ಪ್ರಕಾರ, ಹೆಚ್ಚುತ್ತಿರುವ ಅಂತರರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಗುಣವಾಗಿ ದೇಶದಲ್ಲಿ ಡೀಸೆಲ್ ದರವು ಶೀಘ್ರದಲ್ಲೇ ಲೀಟರ್‍ಗೆ 80 ರೂ. ಗಡಿ ದಾಟುವ ಸಾಧ್ಯತೆಯಿದೆ.
Advertisement
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ.27ರಿಂದ 30ಕ್ಕೆ ಏರಿಸಿದರೆ, ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.16.75ರಿಂದ 30ಕ್ಕೆ ಏರಿಸಿತ್ತು. ಹೀಗಾಗಿ ಡೀಸೆಲ್ ಪೆಟ್ರೋಲ್‍ಗಿಂತ ಹೆಚ್ಚಾಗಿದೆ.
ಯಾವ ನಗರದಲ್ಲಿ ಎಷ್ಟು ದರ?:
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.35 ರೂ. ಇದ್ದರೆ, ಡೀಸೆಲ್ ದರ 75.51 ರೂ. ನಿಗದಿಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‍ಗೆ 86.54 ರೂ. ಹಾಗೂ ಡೀಸೆಲ್ ದರ 78.22 ರೂ. ಇದ್ದರೆ ಚೆನ್ನೈನಲ್ಲಿ ಪೆಟ್ರೋಲ್ 83.04 ರೂ. ಹಾಗೂ ಡೀಸೆಲ್ 77.17 ರೂ. ನಿಗದಿಯಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.45 ರೂ., ಡೀಸೆಲ್ ಬೆಲೆ 75.06 ರೂ. ಇದೆ.