ನವದೆಹಲಿ: ಲಾಕ್‍ಡೌನ್ ಘೋಷಣೆ ಆಗುತ್ತಿದ್ದಂತೆ ಬಾರ್‌ಗಳ ಮುಂದೆ ಜನ ಮುಗಿಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದೆಹಲಿಯಲ್ಲಿ ಇಂದಿನಿಂದ ಒಂದುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಜಾರಿಯಲ್ಲಿ ಇರಲಿದೆ. ಲಾಕ್‍ಡೌನ್ ಆದೇಶ ಹೊರಬೀಳುತ್ತಿದ್ದಂತೆ ಮದ್ಯಪ್ರಿಯರು ಬಾರ್ ಮುಂದೆ ಸಾಲುಗಟ್ಟಿನಿಂತಿದ್ದರು. ನಾ ಮುಂದು.. ತಾ ಮುಂದು.. ಎಂದು ಒಂದು ವಾರಕ್ಕೆ ಆಗುವಷ್ಟು ಮದ್ಯವನ್ನು ಕೊಂಡುಕೊಳ್ಳುತ್ತಿದ್ದರು.
Advertisement
Delhi: People gather in large numbers outside a liquor shop in Khan Market; social distancing norms flouted.
Lockdown to be imposed in the national capital from 10pm tonight to 6am next Monday (26th April). pic.twitter.com/Fq1iNGJo1d
— ANI (@ANI) April 19, 2021
Advertisement
ದೆಹಲಿಯ ಖಾನ್ ಮಾರ್ಕೆಟ್‍ನ ಬಾರ್‍ವೊಂದರ ಮುಂದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಉದ್ದುದ್ದದ ಕ್ಯೂ ನಿಂತಿರೋದು ಕಂಡುಬಂದಿದೆ. ದೆಹಲಿಯ ಹಲವೆಡೆ ಪೊಲೀಸರು ಈಗಾಗಲೇ ಬ್ಯಾರಿಕೇಡ್‍ಗಳನ್ನು ಹಾಕಿ ಭದ್ರತೆ ಒದಗಿಸಿದ್ದಾರೆ.
Advertisement
#WATCH Delhi: A woman, who has come to purchase liquor, at a shop in Shivpuri Geeta Colony, says, “…Injection fayda nahi karega, ye alcohol fayda karegi…Mujhe dawaion se asar nahi hoga, peg se asar hoga…” pic.twitter.com/iat5N9vdFZ
— ANI (@ANI) April 19, 2021
Advertisement
“ಇಂಜೆಕ್ಷನ್ ನಿಂದ ಪ್ರಯೋಜನವಾಗಲ್ಲ. ಆಲ್ಕೋಹಾಲ್‍ನಿಂದಲೇ ಪ್ರಯೋಜನವಾಗುತ್ತದೆ. ನನಗೆ ಔಷಧಿಯಿಂದ ಏನು ಪರಿಣಾಮ ಆಗಲ್ಲ. ಒಂದು ಪೆಗ್ ಹಾಕಿದ್ರೆನೆ ಎಫೆಕ್ಟ್. ನಾನು ಇಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ. ಮಂದೆನೂ ಬಚಾವ್ ಆಗುತ್ತೇನೆ” ಎಂದು ಶಿವಪುರ ಗೀತಾ ಕಾಲೋನಿಯ ಅಂಗಡಿಯೊಂದರಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆಯೊಬ್ಬರು ಹೇಳಿದ್ದಾರೆ.
Delhi: Migrant workers gather at Anand Vihar Terminal to return to their native places
“I do a job in Delhi and work is yet to resume, so it’s better to return home than to sit here”, says Navin, a native of Nepal. pic.twitter.com/i47VgbeIIA
— ANI (@ANI) April 19, 2021
ಲಾಕ್‍ಡೌನ್ ವೇಳೆ ಆಹಾರ, ಮೆಡಿಕಲ್ ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಯಾವುದೇ ಪ್ರತಿಬಂಧ ಇರೋದಿಲ್ಲ. ಮದುವೆಯಲ್ಲಿ ಕೇವಲ 50 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲರೂ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಮದುವೆಗೆ ಪಾಸ್ ನೀಡಲಾಗುತ್ತದೆ ಎಂದು ಕೆಲವಷ್ಟು ರೂಲ್ಸ್‍ಗಳನ್ನು ನೀಡಿ ಏಪ್ರಿಲ್ 26ರ ತನಕ ದೆಹಲಿಯಲ್ಲಿ ಲಾಕ್‍ಡೌನ್ ಇರಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.