ಮುಂಬೈ: ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಗೆ ಎನ್‍ಸಿಬಿ ಸಮನ್ಸ್ ನೀಡಿರೋದು ಅಧಿಕೃತವಾಗಿ ದೃಢಪಟ್ಟಿದೆ. ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಸಮನ್ಸ್ ನೀಡಿದೆ.
ನಾಲ್ವರು ನಟಿಯರು ಮತ್ತು ಫ್ಯಾಶನ್ ಡಿಸೈನರ್ ಸಿಮೋನ್ ಖಂಬಟ್ಟಾ ಎನ್‍ಸಿಬಿ ಈ ವಾರ ಸಮನ್ಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆ ಕೆಲವು ದಿನಗಳ ಹಿಂದೆ ರಿವೀಲ್ ಆಗಿದೆ. ಸಮನ್ಸ್ ನೀಡಿರೋದು ಖಚಿತವಾಗಿದ್ದು, ಯಾವ ದಿನ ವಿಚಾರಣೆಗೆ ಹಾಜರಾಗಲು ಎನ್‍ಸಿಬಿ ಸೂಚಿಸಿದೆ.
Deepika Padukone has been summoned on September 25 while Shraddha Kapoor and Sara Ali Khan have been summoned on September 26. https://t.co/uPARX6Setw
— ANI (@ANI) September 23, 2020
ಸೆಪ್ಟೆಂಬರ್ 24ಕ್ಕೆ ಸಿಮೋನ್ ಖಂಬಟ್ಟಾ, ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 25ಕ್ಕೆ ದೀಪಿಕಾ ಪಡುಕೋಣೆ ಮತ್ತು ಸೆಪ್ಟೆಂಬರ್ 26ಕ್ಕೆ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ವಿಚಾರಣೆಗೆ ಹಾಜರಾಗಬೇಕಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಿದೆ ಎನ್ನಲಾಗಿದೆ. ರಿಯಾ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸುಮಾರು 25 ತಾರೆಯರ ಹೆಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದೆ ಡ್ರಗ್ಸ್ ಖರೀದಿಗಾಗಿ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ
ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್ ಸ್ಕ್ರೀನ್‍ಶಾಟ್ ರಿವೀಲ್ ಆಗಿತ್ತು ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಆದ್ರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ