Connect with us

Bollywood

ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

Published

on

ಮುಂಬೈ: ಡ್ರಗ್ಸ್ ಚಾಟ್‍ನಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದಂತೆ, ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳುತ್ತಾರೆ ಎಂದು ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾಗೆ ಸಂಬಂಧಿಸಿದ ಖಾಸಗಿ ವಾಹಿನಿಯ ಸುದ್ದಿಗೆ ಕಂಗನಾ ರಣಾವತ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆಶಿಕಿ ಚೆಲುವೆ, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ನಡೆಸಿರುವ ವಾಟ್ಸಪ್ ಸಂಭಾಷಣೆ ರಿವೀಲ್ ಆಗಿದೆ.

ಕಂಗನಾ ಟ್ವೀಟ್: ಡ್ರಗ್ಸ್ ಸೇವನೆ ಖಿನ್ನತೆಯುನ್ನುಂಟು ಮಾಡುತ್ತೆ ಮತ್ತೊಮ್ಮೆ (ರಿಪೀಟ್ ಆಫ್ಟರ್ ಮಿ) ಹೇಳುತ್ತಿದ್ದೇನೆ. ತಮ್ಮನ್ನು ದೊಡ್ಡ ಸ್ಟಾರ್, ಹೈ ಸೊಸೈಟಿಯ ಮಕ್ಕಳು ಎಂದು ಕರೆದುಕೊಳ್ಳುವರು ಉತ್ತಮ ಲಾಲನೆ-ಪಾಲನೆಯಲ್ಲಿ ಬೆಳೆದಿರುತ್ತಾರೆ. ಆದ್ರೂ ತಮ್ಮ ಮ್ಯಾನೇಜರ್ ಬಳಿ ಮಾಲ್ ಇದೆಯಾ ಎಂದು ಕೇಳುತ್ತಾರೆ.

ಮಗದೊಂದು ಟ್ವೀಟ್ ಮಾಡಿರುವ ಕಂಗನಾ, ನೆರೆಯ ದೇಶಗಳ ಸ್ವಾರ್ಥಿಗಳು ನಮ್ಮ ರಾಷ್ಟ್ರ ಮತ್ತು ಯುವ ಜನತೆಯ ಭವಿಷ್ಯವನ್ನ ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ. ಯುವ ಜನತೆಗೆ ಡ್ರಗ್ಸ್ ಸೇವನೆಗೆ ಪ್ರಚೋದಿಸುತ್ತಿವೆ. ನಮ್ಮ ಮುಂದಿರುವ ದೊಡ್ಡ ಸವಾಲುಗಳಲ್ಲಿ ಇದು ಒಂದಾಗಿದೆ. ಈ ವಿಷಯದಲ್ಲಿ ಚರ್ಚಿಸಲು ಸಿದ್ಧರಿದ್ದೇವಾ ಎಂದು ಪ್ರಶ್ನೆ ಮಾಡಿದ್ದಾರೆ.

ರಿಪೀಟ್ ಆಫ್ಟರ್ ಮಿ: ಜೂನ್ ನಲ್ಲಿ ದೀಪಿಕಾ ಪಡುಕೋಣೆ ರಿಪೀಟ್ ಆಫ್ಟರ್ ಮಿ ಎಂಬ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದರು. ಇದೀಗ ಕಂಗನಾ ಅದೇ ಪದಗಳನ್ನ ಬಳಸುವ ಮೂಲಕ ದೀಪಿಕಾರಿಗೆ ಟಾಂಗ್ ನೀಡಿದ್ದಾರೆ.

ದೀಪಿಕಾ ಟ್ವೀಟ್: ರಿಪೀಟ್ ಆಫ್ಟರ್ ಮಿ: ಮಾನಸಿಕ ಖಿನ್ನತೆಯನ್ನ ಗುಣಮುಖ ಮಾಡಬಹುದು. ರಿಪೀಟ್ ಆಫ್ಟರ್ ಮಿ: ಖಿನ್ನತೆಗೆ ಚಿಕಿತ್ಸೆ ಇದೆ. ರಿಪೀಟ್ ಆಫ್ಟರ್ ಮಿ: ಖಿನ್ನತೆಗೆ ತಡೆಯೊಡ್ಡಬಹುದು ಎಂದು ದೀಪಿಕಾ ಟ್ವೀಟ್ ಮಾಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿದ್ದರು.

ಈ ವಾರ ಗುಳಿಕೆನ್ನೆ ಚೆಲುವೆಗೆ ಎನ್‍ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್‍ಶಾಟ್ ಗಳು ರಿವೀಲ್ ಆಗಿವೆ. ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆಯ ಘಾಟಿನ ಸುಳಿವು ನೀಡಿದೆ. ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ. ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇಂದು ಜಯ್ ಸಾಹಾ, ಕರೀಷ್ಮಾ ಮತ್ತು ಸುಶಾಂತ್ ಮ್ಯಾನೇಜರ್ ಶೃತಿ ಮೋದಿಯನ್ನ ಎನ್‍ಸಿಬಿ ವಿಚಾರಣೆ ನಡೆಸಲಿದೆ. ಈ ಮೂವರ ವಿಚಾರಣೆಯಲ್ಲಿ ಮತ್ತಷ್ಟು ಹೆಸರುಗಳು ಹೊರ ಬರುವ ಸಾಧ್ಯತೆಗಳಿವೆ. ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

Click to comment

Leave a Reply

Your email address will not be published. Required fields are marked *