ದೀಪಿಕಾ ವಾಟ್ಸಪ್ ಚಾಟ್ ಕೋಡ್‍ವರ್ಡ್ ರಹಸ್ಯ ರಿವೀಲ್!

Public TV
2 Min Read
Deepika 4

-ಮಾಲ್, ಹ್ಯಾಶ್, ವೀಡ್ ಅರ್ಥ ಇದೇನಾ?
-ಡ್ರಗ್ಸ್ ಸೇವನೆ ಬಗ್ಗೆ ಲೀಲಾ ಹೇಳಿದ್ದೇನು?

ಮುಂಬೈ: ನಟಿ ದೀಪಿಕಾ ಪಡುಕೋಣೆ ಎನ್‍ಸಿಬಿ ವಿಚಾರಣೆ ವೇಳೆ ವಾಟ್ಸಪ್ ಚಾಟ್ ನಲ್ಲಿ ಬಳಸಲಾಗಿದ್ದ ಕೋಡ್‍ವರ್ಡ್ ರಹಸ್ಯ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಜೊತೆ ದೀಪಿಕಾ ಪಡುಕೋಣೆ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿಯನ್ನು ಖಾಸಗಿ ಮಾಧ್ಯಮ ಪ್ರಕಟಿಸಿತ್ತು. ಇಬ್ಬರ ಸಂಭಾಷಣೆಯಲ್ಲಿ ಮಾಲ್, ಹ್ಯಾಶ್ ಮತ್ತು ವೀಡ್ ಎಂಬ ಕೋಡ್‍ವರ್ಡ್ ಬಳಸಲಾಗಿತ್ತು. ಶನಿವಾರ ವಿಚಾರಣೆಗೆ ಹಾಜರಾಗಿದ್ದ ದೀಪಿಕಾ ಪಡುಕೋಣೆ ಅವರನ್ನು ತನಿಖಾಧಿಕಾರಿಗಳು ಕೋಡ್‍ವರ್ಡ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

deepika 1601094882

ಎನ್‍ಸಿಬಿ ಅಧಿಕಾರಿ: ನಿಮ್ಮ ಪ್ರಕಾರ ಮಾಲ್ ಇದೇನಾ ಎಂದರೇನು?
ದೀಪಿಕಾ: ಹೌದು, ನಾನು ಮಾಲ್ ಕೇಳಿದ್ದೇನೆ. ನೀವು ಅಂದುಕೊಂಡ ಮಾಲ್ ನಾನು ಕೇಳಿಲ್ಲ. ನಾವು ಸಿಗರೇಟ್ ನ್ನು ಮಾಲ್ ಎಂದು ಕರೆಯುತ್ತೇವೆ. ಸಿಗರೇಟ್ ಅನ್ನೋ ಬದಲಾಗಿ ಮಾಲ್ ಎಂಬ ಕೋಡ್‍ವರ್ಡ್ ಬಳಸುತ್ತೇವೆ.
ಎನ್‍ಸಿಬಿ ಅಧಿಕಾರಿ: ಹಾಗಾದ್ರೆ ಚಾಟ್ ನಲ್ಲಿರುವ ಹ್ಯಾಶ್ ಪದದ ಅರ್ಥವೇನು?
ದೀಪಿಕಾ: ಬೇರೆ ಬೇರೆ ಸಿಗರೇಟ್ ಗಳಿಗೆ ನಾವು ಹ್ಯಾಶ್ ಅನ್ನುತ್ತೇವೆ. ಹ್ಯಾಶ್ ಟೈಪ್ ಸಿಗರೇಟ್ ಮತ್ತು ವೀಡ್ ಟೈಪ್ ಸಿಗರೇಟ್ ಎಂದು ಕರೆಯುತ್ತೇವೆ.

Deepika 3 e1601122882879

ಎನ್‍ಸಿಬಿ ಅಧಿಕಾರಿ: ಹ್ಯಾಶ್ ಮತ್ತು ವೀಡ್ ಒಂದೇ ಹೇಗೆ ಆಗುತ್ತೆ?
ದೀಪಿಕಾ: ತೆಳುವಾದ ಸಿಗರೇಟ್ ಗಳಿಗೆ ಹ್ಯಾಶ್ ಅಂದ್ರೆ, ದಪ್ಪವಾಗಿರುವ ಸಿಗರೇಟ್ ಗೆ ವೀಡ್ ಅಂತೀವಿ.
ದೀಪಿಕಾ: ನಾನು ಸಿಗರೇಟ್ ಸೇದುತ್ತೇನೆ, ಆದ್ರೆ ಡ್ರಗ್ಸ್ ಸೇವಿಸಲ್ಲ. ಫಿಲಂ ಇಂಡಸ್ಟ್ರಿಯಲ್ಲಿರೋ ನಾವು ಇದೇ ರೀತಿ ಕೋಡ್‍ವರ್ಡ್ ಬಳಸಿ ಸಿಗರೇಟ್ ತರಿಸಿಕೊಳ್ಳುತ್ತೇವೆ. ಜೊತೆಯಲ್ಲಿ ಮಾತನಾಡುವಾಗ ಮತ್ತು ವಾಟ್ಸಪ್ ಗಳಲ್ಲಿ ಕೋಡ್‍ವರ್ಡ್ ಬಳಕೆ ಮಾಡುತ್ತೇವೆ. ಇದನ್ನೂ ಓದಿ: ಐದೂವರೆ ಗಂಟೆ ದೀಪಿಕಾಗೆ ಎನ್‍ಸಿಬಿ ಡ್ರಿಲ್-ಡ್ರಗ್ಸ್ ವ್ಯೂಹದಿಂದ ಹೊರ ಬರ್ತಾರಾ?

DEEPIKA PADUKONE

ಶನಿವಾರ ಐದೂವರೆ ಗಂಟೆ ವಿಚಾರಣೆ ಎದುರಿಸಿದ ಮಸ್ತಾನಿಯ ಮೊಬೈಲ್ ನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಿದ ಹಿನ್ನೆಲೆ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಇತ್ತ ನಟಿಯರಾದ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತ ದೀಪಿಕಾ ಜೊತೆ ಚಾಟ್ ನಡೆಸಿದ್ದ ಕರೀಷ್ಮಾರನ್ನ ಎನ್‍ಸಿಬಿ ಎರಡು ಬಾರಿ ಡ್ರಿಲ್ ಮಾಡಿದೆ. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

Deepika Shraddha Rakul Sara

ದೀಪಿಕಾ ವಾಟ್ಸಪ್ ಚಾಟ್:
ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?
ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.
ದೀಪಿಕಾ: ಯೆಸ್, ಪ್ಲೀಸ್
ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.
ದೀಪಿಕಾ: ಹ್ಯಾಶ್ ತಾನೇ? ವೀಡ್ ಅಲ್ಲವಲ್ಲಾ?
ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್‍ಗೆ ಹೇಳುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *