ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ವಾರ :ಭಾನುವಾರ, ತಿಥಿ: ನವಮಿ, ನಕ್ಷತ್ರ: ಪುಷ್ಯ,
ಅಧಿಕ ಆಶ್ವಯುಜ ಮಾಸ, ಕೃಷ್ಣ ಪಕ್ಷ.
ರಾಹುಕಾಲ: 4.38 ರಿಂದ 6.07
ಗುಳಿಕ ಕಾಲ: 3.08 ರಿಂದ 4.38
ಯಮಗಂಡಕಾಲ: 12.09 ರಿಂದ 1.39.
ಮೇಷ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಭೋಗವಸ್ತು ಪ್ರಾಪ್ತಿ, ಮನಶಾಂತಿ, ಸಮಾಜದಲ್ಲಿ ಗೌರವ, ಮಿತ್ರರಿಂದ ಸಹಾಯ, ಆದಷ್ಟು ಜಾಗ್ರತೆಯಿಂದ ಇರಿ, ಶತ್ರು ಭಾದೆ.
Advertisement
ವೃಷಭ: ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ, ಯತ್ನ ಕಾರ್ಯಗಳ ಅಡತಡೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮನೆಯಲ್ಲಿ ಸಂತಸ, ಮಕ್ಕಳಿಂದ ನೋವು, ಅನಾರೋಗ್ಯ.
Advertisement
ಮಿಥುನ: ಆಸ್ತಿ ವಿಚಾರಗಳಲ್ಲಿ ಕಲಹ ಎಚ್ಚರ, ಕೃಷಿಯಲ್ಲಿ ಲಾಭ, ಉತ್ತಮ ಬುದ್ಧಿಶಕ್ತಿ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ವ್ಯರ್ಥ ಧನಹಾನಿ, ದುರಾಲೋಚನೆ.
Advertisement
ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಕ್ಲೇಷ, ಸುಳ್ಳು ಮಾತನಾಡುವುದು, ಅಕಾಲ ಭೋಜನ, ರಾಜ ವಿರೋಧ, ಕ್ರಯ ವಿಕ್ರಯಗಳಲ್ಲಿ ಲಾಭ.
Advertisement
ಸಿಂಹ: ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಷ್ಟ ವಸ್ತುಗಳ ಖರೀದಿ, ಚಂಚಲ ಮನಸ್ಸು, ಮಾತುಗಳಿಂದ ಕಲಹ ಸಂಭವ, ದಂಡ ಕಟ್ಟುವಿರಿ, ಮನಕ್ಲೇಷ.
ಕನ್ಯಾ: ಆತ್ಮೀಯರಲ್ಲಿ ಕಲಹ, ರಾಜ ಭಯ, ಶತ್ರು ಭಾದೆ, ಮಾತಿನ ಮೇಲೆ ಹಿಡಿತವಿರಲಿ, ವಾಹನ ರಿಪೇರಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮಾತಾಪಿತರಲ್ಲಿ ಪ್ರೀತಿ.
ತುಲಾ: ಪಾಲುದಾರಿಕೆ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅನಾರೋಗ್ಯ, ಕಾರ್ಯ ವಿಫಲ, ಸಾಲಭಾದೆ, ವಾಹನ ರಿಪೇರಿ, ಚಂಚಲ ಮನಸ್ಸು.
ವೃಶ್ಚಿಕ: ದುಡುಕುವ ಸ್ವಭಾವ, ಗುರು ಹಿರಿಯರಲ್ಲಿ ಭಕ್ತಿ, ದಾಂಪತ್ಯದಲ್ಲಿ ಪ್ರೀತಿ, ಶಸ್ತ್ರಚಿಕಿತ್ಸೆ ಸಾಧ್ಯತೆ, ಉದರಭಾದೆ, ಎಲ್ಲಿ ಹೋದರು ಅಶಾಂತಿ.
ಧನಸು: ಸ್ತ್ರೀಸೌಖ್ಯ, ಪುಣ್ಯಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಧನಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪ್ರಿಯ ಜನರ ಭೇಟಿ, ಸುಖ ಭೋಜನ.
ಮಕರ: ಬಣ್ಣದ ಮಾತಿಗೆ ಮರುಳಾಗದಿರಿ, ನಂಬಿಕೆ ದ್ರೋಹ, ಅತಿಯಾದ ಕೋಪ, ಆಲಸ್ಯ ಮನೋಭಾವ, ದುಷ್ಟ ಜನರಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ ಸಾಧ್ಯತೆ.
ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ವ್ಯಾಪಾರ-ವ್ಯವಹಾರಗಳಲ್ಲಿ ಮಂದಗತಿ, ಖರ್ಚಿನ ಬಗ್ಗೆ ನಿಗಾ ಇರಲಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಗೆಳೆಯರಲ್ಲಿ ಕಲಹ.
ಮೀನ: ಅಲ್ಪ ಪ್ರಗತಿ, ಅಪಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ, ವೈರಿಗಳಿಂದ ದೂರವಿರಿ, ಸ್ಥಿರಾಸ್ತಿ ಖರೀದಿ.