ಮೈಸೂರು: ಸ್ಯಾಂಡಲ್‍ವುಡ್ ಐರಾವತ ದರ್ಶನ್ ಅವರ ತೋಟದ ಮನೆಗೆ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಭೇಟಿ ನೀಡಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ.
ನಟ ದರ್ಶನ್ ಅವರ ಮೈಸೂರಿನ ಟಿ.ನರಸೀಪುರದಲ್ಲಿರುವ ತೋಟದ ಮನೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ,ಸಿ.ಪಾಟೀಲ್, ಅಲ್ಲಿನ ತೋಟದಲ್ಲಿ ಸುತ್ತಾಡಿ ಸಮಯ ಕಳೆದರು. ಇತ್ತ ಸಚಿವರು ತಮ್ಮ ಮನೆಗೆ ಆಗಮಿಸುತ್ತಿದ್ದಂತೆ ದರ್ಶನ್ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಿದರು.
ಇನ್ನೂ ದರ್ಶನ್ ಅವರ ತೋಟದ ಮನೆಯನ್ನು ಸುತ್ತಾಡಿದ ಸಚಿವರು ಅಲ್ಲಿನ ವೈಶಿಷ್ಟ್ಯ ಮತ್ತು ಕೃಷಿಯ ಬಗ್ಗೆ ಮಾಹಿತಿ ಪಡೆದರು. ನಂತರ ಅಲ್ಲಿನ ನಿಸರ್ಗದ ಸೊಗಸಾದ ವಾತಾವರಣದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಉತ್ತಮ ಸಮಯವನ್ನು ಕಳೆದರು. ಸಚಿವರೊಂದಿಗೆ ಬಿಜೆಪಿಯ ಮುಖಂಡರು ಮತ್ತು ನಿರ್ಮಾಪಕ ಎನ್. ಸಂದೇಶ್ ಜೊತೆಗಿದ್ದರು.