ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿ ವೈರಸ್‍ಗೆ ಬೆದರಿ ಕೆಲವರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಯಮಾಡಿ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಳ್ಳಬೇಡಿ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಭಯ ಬಿದ್ದು ದಯಮಾಡಿ ತಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಇಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ನಮ್ಮ ಸಿಬ್ಬಂದಿಯೊಬ್ಬರು ಬಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ದಯಮಾಡಿ ಹಾಗೆಲ್ಲ ಮಾಡಬೇಡಿ, ಸರ್ಕಾರ ನಿಮ್ಮ ಜೀವಕ್ಕೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಯಾವುದಕ್ಕೂ ಹೆದರಬೇಡಿ ಇದೊಂದು ಕಾಯಿಲೆ ಅಷ್ಟೆ. ಕಾಯಿಲೆ ಅಂತೆಯೇ ನೋಡಿ. ಸದ್ಯ ಅದಕ್ಕೆ ಔಷಧ ಸಿಗದೇ ಇರಬಹುದು ಎಂದು ಪೊಲೀಸ್ ಆಯುಕ್ತರು ಜನರಲ್ಲಿ ಕೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪೊಲೀಸರಲ್ಲಿ ಕೊರೊನಾ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸುಮಾರು ಜನ ಪೊಲೀಸ್ ಸಿಬ್ಬಂದಿ ಜೊತೆ ಮಾತಾನಾಡಿದ್ದೇನೆ. ವಾಟ್ಸಾಪ್ ಗ್ರೂಪ್ ಕೂಡ ಮಾಡಿದ್ದೇವೆ. ಅವರ ಕಾಂಟಾಕ್ಟ್ ಮಾಡಿ ಮನೋಸ್ಥೈರ್ಯ ಮೂಡಿಸುತ್ತಿದೇವೆ. ಎಲ್ಲಾರೂ ಟ್ರೀಟ್ಮೆಂಟ್‍ನಲ್ಲಿದ್ದಾರೆ. ಯಾರೂ ಐಸಿಯುನಲ್ಲಿಲ್ಲ. ಅಲ್ಲದೆ ಎಲ್ಲಾ ರಿಕವರಿ ಆಗ್ತಿದ್ದಾರೆ ಎಂದರು.
ನಮ್ಮವರು ಎಲ್ಲಾ ಕಡೆ ಹೋಗಿದ್ದಾರೆ. ತುಂಬಾ ಸೆನ್ಸಿಟವ್ ಕಡೆಯೂ ತೆರಳಿದ್ದಾರೆ. ಸಿಸಿಸಿ ಕೊರೊನಾ ಕೇರ್ ಸೆಂಟರ್ ಅಂತ ಸರ್ಕಾರ ಘೋಷಣೆ ಮಾಡಿದೆ. ಅಲ್ಲಿ ನಮ್ಮವರನ್ನ ಇರಿಸಲಾಗಿದೆ. ಅಲ್ಲಿ ಬೇರೆ ತರ ಟ್ರಿಟ್ಮೆಂಟ್ ಇದೆ ಎಂದು ತಿಳಿಸಿದರು.