ಡೆಹಾರಡೂನ್: ಸುಪ್ರೀಂಕೋರ್ಟ್ ನಲ್ಲಿ ತ್ರಿಪಲ್ ತಲಾಖ್ ವಿರುದ್ಧ ಧ್ವನಿ ಎತ್ತಿದ್ದ ಶಯರಾ ಬನೋ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶನಿವಾರ ಡೆಹರಾಡೂನ್ ನಗರದ ಪಕ್ಷದ ಕಚೇರಿಯಲ್ಲಿ ಶಯರಾ ಬನೋ ಕಮಲದ ಬಾವುಟ ಹಿಡಿದರು. ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು.
Advertisement
ತ್ರಿಪಲ್ ತಲಾಖ್ ವಿರುದ್ಧ ಶಯರಾ ಬನೋ ತಮ್ಮ ಧ್ವನಿ ಎತ್ತಿದ್ದರು. ಅದೇ ರೀತಿ ಪಕ್ಷದ ಸಿದ್ಧಾಂತಗಳನ್ನು ಮುಂದೆ ತೆಗೆದುಕೊಂಡು ಹೋಗಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯವರೆಗೂ ಬಿಜೆಪಿಯ ಸಿದ್ಧಾಂತಗಳನ್ನು ತಲುಪಿಸುವಲ್ಲಿ ಶಯರಾ ಬನೋ ಅವರು ಕೆಲಸ ಮಾಡಬೇಕಿದೆ ಎಂದು ಬಸೀಂಧರ್ ಭಗತ್ ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬಬಿತಾ ಫೋಗಟ್
Advertisement
Advertisement
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿರುವ ಶಯರಾ ಬನೋ, ಪಕ್ಷ ನನ್ನನ್ನು ಎತ್ತರಕ್ಕೆ ಬೆಳೆಸಿದಲ್ಲಿ ಜನರನ್ನ ಬಿಜೆಪಿಯತ್ತ ಕರೆತರುವ ಕೆಲಸ ಮಾಡುತ್ತೇನೆ. ನನ್ನನ್ನು ಬಿಜೆಪಿಗೆ ಸೇರಯವಂತೆ ಪ್ರೇರಿಪಿಸಿದ ವಿಚಾರಧಾರೆಗಳನ್ನು ಜನರಿಗೆ ತಿಳಿ ಹೇಳುತ್ತೇನೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಪಕ್ಷದ ಸಿದ್ಧಾಂತಗಳ ಮನವರಿಕೆ ಮಾಡೋ ಕೆಲಸ ಮಾಡುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಸುದ್ದಿಗೆ ಸ್ಪಷ್ಟನೆ ನೀಡಿದ ವಿನಯ್ ಕುಲಕರ್ಣಿ
Advertisement
तीन तलाक के खिलाफ आवाज उठाने वाली बहादुर महिला सायरा बानो जी ने आज प्रदेश कार्यालय देहरादून में प्रदेश अध्यक्ष श्री @bansidharbhagat जी एवं प्रदेश महामंत्री संगठन श्री @ajaeybjp जी की उपस्थिति में भाजपा की सदस्यता ग्रहण की। pic.twitter.com/1yxMbnG8pj
— BJP Uttarakhand (@BJP4UK) October 10, 2020
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಶಯರಾ ಬನೋ ಅವರಿಗೆ ಪಕ್ಷ ಯಾವುದೇ ಜವಾಬ್ದಾರಿಗಳನ್ನು ನೀಡಿಲ್ಲ. ಆದ್ರೆ ಶಯರಾ ಬನೋ 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ ಎಂದು ವರದಿಯಾಗಿದ್ದಾರೆ.