ಚಂಡೀಗಢ: ಕಾಮನ್ ವೆಲ್ತ್ ಪಂದ್ಯಗಳಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಕುಸ್ತಿಪಟು ಬಬಿತಾ ಫೋಗಟ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. 29 ವರ್ಷದ ಬಬಿತಾ ಹರ್ಯಾಣ ಪೊಲೀಸ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಬಬಿತಾ ಫೋಗಟ್, ಬಿಜೆಪಿ ಪಕ್ಷ ಸೇರ್ಪಡೆಯಾಗುವ ಉದ್ದೇಶದಿಂದ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದೇನೆ. ಸರ್ಕಾರಿ ಉದ್ಯೋಗಿಯಾಗಿ ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದು ತಪ್ಪು. ಹಾಗಾಗಿ ಗೊಂದಲಗಳಿಗೆ ಎಡೆಮಾಡಿಕೊಡದೇ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಬಿತಾ, ಚರಖಿ ದಾದರೀ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೀಳಿಯಲಿದ್ದಾರೆ ಎಂದು ವರದಿಯಾಗಿದೆ.
Advertisement
Wrestler & BJP leader Babita Phogat on resignation from her post in Haryana Police: I had joined the party, you can only join the party after submitting resignation else it would have been conflict of interest. I had submitted my resignation in August. (File pic) https://t.co/Iux6QBBrOU pic.twitter.com/DoKI0H9eQQ
— ANI (@ANI) September 12, 2019
Advertisement
ನನ್ನ ರಾಜೀನಾಮೆಯನ್ನು ಆಗಸ್ಟ್ 13ರಂದು ನೀಡಿದ್ದೇನೆ. ಹರ್ಯಾಣ ಪೊಲೀಸ್ ಇಲಾಖೆ ನನ್ನ ರಾಜೀನಾಮೆಯನ್ನು ಅಂಗೀಕರಿಸಿದೆ. ಆಗಸ್ಟ್ 12ರಂದು ತಂದೆ ಮಹಾವೀರ್ ಫೋಗಟ್ ಜೊತೆ ಬಬಿತಾ ಅಧಿಕೃತವಾಗಿ ಕೇಂದ್ರ ಸಚಿವ ಕಿರಣ್ ರಿಜಿಜೂ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
29 ವರ್ಷದ ಬಬಿತಾ ಫೋಗಟ್ 2014 ಮತ್ತು 2018ರ ಕಾಮನ್‍ವೆಲ್ತ್ ಪಂದ್ಯಗಳಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. 2012ರ ವರ್ಲ್ಡ್ ರೆಸಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದರು.