ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ -ರೈತರಿಗೆ ವ್ಯಾಕ್ಸಿನ್ ಹಾಕಿದ ಸಿಬ್ಬಂದಿ

Public TV
1 Min Read
vaccination BALLARY

ಬಳ್ಳಾರಿ: ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ತೆರದು, ಕೊರೊನಾ ಲಸಿಕೆ ಹಾಕಿಸಿ ಕೊಳ್ಳದ ಜನರ ಮನವೊಲಿಸಿಜನರಿಗೆ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಬಳ್ಳಾರಿಯಲ್ಲಿ ಯಶಸ್ವಿಯಾಗಿದ್ದಾರೆ.

vaccination BALLARY2 medium

ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕೊಪ್ಪಾ ಗ್ರಾಮದಲ್ಲಿ ಬಹುತೇಕ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತಿದ್ದರು. ಮನೆ ಮನೆಗೆ ಲಸಿಕೆ ಹಾಕಲು ಬಂದವರನ್ನು ಊಹಾಪೋಹಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆಯದೇ ಇದ್ದರು. ಬಹುತೇಕ ಜನರು ಕೃಷಿಕರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಅವರ ಗ್ರಾಮದ ಹೊರವಲಯದಲ್ಲಿ ಇರುವ ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರವನ್ನು ತೆರೆದು, ರೈತರಿಗೆ ಅಲ್ಲಿಗೆ ಬಂದು ಲಸಿಕೆ ಹಾಕಿ ಕೊಳ್ಳವಂತೆ ಮಾಡಿದ್ದರು. ಇದನ್ನೂ ಓದಿ: ಮರಗಳನ್ನು ರಕ್ಷಿಸುವ ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

vaccine 1 1 medium

ಸಂಡೂರು ತಾಲೂಕು ಆರೋಗ್ಯ ಇಲಾಖೆ ವಿಶೇಷ ಪ್ರಯತ್ನದಿಂದಾಗಿ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ 100ಕ್ಕೂ ಅಧಿಕ ರೈತರಿಗೆ ಲಸಿಕೆ ಹಾಕಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತಿದ್ದ ರೈತರಿಗೆ ಲಸಿಕೆ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *