ಉಡುಪಿ: ಹಿಂದೂ ಮುಖಂಡ ಪ್ರವೀಣ್ ತೊಗಾಡಿಯಾರನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಯಾಕೆ ಕರೆದಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
Advertisement
ಉಡುಪಿಯಲ್ಲಿ ಮಾತನಾಡಿದ ಅವರು, ತೊಗಾಡಿಯಾರನ್ನು ಆಹ್ವಾನಿಸದಿರುವುದು ನೋವು ತಂದಿದೆ. ಅವರು ಸಂಸಾರ ದೂರವಿಟ್ಟು 32 ವರ್ಷ ತ್ಯಾಗದ ಜೀವನ ನಡೆಸಿದವರು. ತೊಗಾಡಿಯಾ ರಾಮಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು. ಇದು ಲಕ್ಷಾಂತರ ಹಿಂದೂಗಳ ತುಡಿತ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಆಹ್ವಾನಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ
Advertisement
Advertisement
ಶಿಲಾನ್ಯಾಸ ದಿನವೇ ದೀಪಾವಳಿ, ರಾಮನವಮಿ:
ನಮ್ಮ ನೆಚ್ಚಿನ ಪ್ರಧಾನಿ ಮೋದಿ ಮೂಲಕ ಶಿಲಾನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದೆ. ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ, ಅಂದೇ ರಾಮನವಮಿ. ರಾಮ ಮಂದಿರ ವಿರೋಧಿಸುವವರು ಸಂವಿಧಾನ ವಿರೋಧಿಗಳು. ನೀವು ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದೀರಿ. ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ? ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ. ಸಿದ್ದರಾಮಯ್ಯ ಟಿಪ್ಪುವಿನ ವೇಷಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದು ಮುತಾಲಿಕ್ ಗುಡುಗಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!