ಹೈದರಾಬಾದ್: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತೆಲಂಗಾಣ ಸರ್ಕಾರವು ನೈಟ್ ಕರ್ಫ್ಯೂವನ್ನು ಶುಕ್ರವಾರದಿಂದ ಮೇ 8 ವರೆಗೆ, 7 ದಿನಗಳ ಕಾಲ ವಿಸ್ತರಿಸಿದೆ. ಇಂದು ರಾತ್ರಿ 9 ಗಂಟೆಯಿಂದ ರಾಜ್ಯವ್ಯಾಪ್ತಿ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು, ಮೇ 8ರ ಬೆಳಗ್ಗೆ 5 ಗಂಟೆವರೆಗೂ ಮುಂದುವರೆಯಲಿದೆ ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
Advertisement
ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿ.ವಿಜಯ್ಸೆನ್ ರೆಡ್ಡಿಯನ್ನೊಳಗೊಂಡಂತೆ ತೆಲಂಗಾಣ ಹೈಕೋರ್ಟ್‍ನ ವಿಭಾಗೀಯ ಪೀಠವು ಶುಕ್ರವಾರ ನೈಟ್ ಕರ್ಫ್ಯೂ ಮುಕ್ತಾಯಗೊಂಡ ನಂತರ ರಾಜ್ಯ ಸರ್ಕಾರ ಏನು ಮಾಡುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ತೆಲಂಗಾಣ ಸರ್ಕಾರ ನೈಟ್ ಕರ್ಫ್ಯೂ ವಿಸ್ತರಿಸಿರುವ ಬಗ್ಗೆ ಅಡ್ವೊಕೇಟ್ ಜನರಲ್ ಬಿ. ಎಸ್ ಪ್ರಸಾದ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
Advertisement
ತೆಲಂಗಾಣದಲ್ಲಿ ಶುಕ್ರವಾರ 7,646 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು 4.35 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದೆ ಮತ್ತು 53 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ 2,261ಕ್ಕೆ ಏರಿಕೆಯಾಗಿದೆ.