– 3 ಲಕ್ಷ ನಗದು, ಲಕ್ಷಾಂತರ ಮೌಲ್ಯದ ನೆಕ್ಲೆಸ್, ವಾಚ್, ಲ್ಯಾಪ್‍ಟಾಪ್ ಕಳವು
ಬೆಂಗಳೂರು: ಅನ್ನ ಹಾಕಿದ ಮನೆಗೆ ಸೆಕ್ಯೂರಿಟಿ ಗಾರ್ಡ್ ಮತ್ತು ಟೀಂ ಕನ್ನ ಹಾಕಿದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ತಿಮ್ಮಪ್ಪನ ಸನ್ನಿಧಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಕರಾಮತ್ತು ವಿಕ್ಷೀಸಿದ ಮನೆ ಮಾಲೀಕನ ಮಗ ಟೆಕ್ಕಿ ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಕಂಡು ತಂದೆಗೆ ಕರೆ ಮಾಡಿದ್ದಾರೆ. ಆದರೆ ತಂದೆ ಶ್ರೀನಿವಾಸ್ ಮನೆಗೆ ಬರುವಷ್ಟರಲ್ಲಿಯೇ ಖದೀಮರ ಗ್ಯಾಂಗ್ ಮನೆ ದೋಚಿ ಹೋಗಿತ್ತು.
Advertisement
Advertisement
ಸಂಸಾರದೊಂದಿಗೆ ಮನೆ ಮಾಲೀಕ ದೀಪಕ್ ಹೊಸ ವರ್ಷಕ್ಕೆ ತಿರುಪತಿಗೆ ಹೋಗಿದ್ದರು. ತಿರುಪತಿಗೆ ಹೋಗುತ್ತಿರುವ ವಿಚಾರವನ್ನು ಮನೆ ಸೆಕ್ಯೂರಿಟಿ ಸಂಜಯ್ ಬಳಿ ಟೆಕ್ಕಿ ದೀಪಕ್ ಹೇಳಿ ಹೋಗಿದ್ದರು. ಇತ್ತ ಸೆಕ್ಯೂರಿಟಿ ಗಾರ್ಡ್ ಸಂಜಯ್, ಮಾಲೀಕರು ತಿರುಪತಿಗೆ ಹಾರುತ್ತಿದ್ದಂತೆ ಮನೆಗೆ ಕನ್ನ ಹಾಕುವುದಕ್ಕೆ ಗುಂಪು ಮಾಡಿಕೊಂಡಿದ್ದಾನೆ. ಮುಂಜಾನೆ ಸೆಕ್ಯೂರಿಟಿ ಗಾರ್ಡ್ ಸಂಜಯ್ ಹಾಗೂ ಗ್ಯಾಂಗ್ ಕೆ.ಜಿ ಹಳ್ಳಿಯಲ್ಲಿರೋ ಸುಹಾನ ಗ್ರೀನ್ಸ್ ಅಪಾರ್ಟ್ ಮೆಂಟ್ ದೀಪಕ್ ಮನೆಗೆ ಲಗ್ಗೆ ಇಟ್ಟಿದ್ದಾನೆ.
Advertisement
Advertisement
ಮನೆಯ ಬೀರುನಲ್ಲಿದ್ದ ಲಾಕರ್ ಮುರಿದು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ. ಮೂರು ಲಕ್ಷ ನಗದು, 700 ಸಿಂಗಾಪುರ ಡಾಲರ್ಸ್ , 5 ಲಕ್ಷ 30 ಮೌಲ್ಯದ ಟ್ಯಾಗ್ ಹ್ಯೂವರ್ ವಾಚ್, 1ಲಕ್ಷದ 80 ಸಾವಿರದ ಬೆಲೆ ಒಂದು ಲ್ಯಾಪ್ ಟಾಪ್, ಒಂದು ಲಾಂಗ್ ನೆಕ್ಲೆಸ್, ಅರ್ಮಾನಿ ಕಂಪನಿಯ 60 ಸಾವಿರ ಬೆಲೆಯ ಒಂದು ವಾಚ್ ಸೇರಿದಂತೆ ದುಬಾರಿ ಬೆಲೆ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಟೆಕ್ಕಿ ದೀಪಕ್ ತಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮ ಸೆಕ್ಯೂರಿಟಿ ಗಾರ್ಡ್ ಸಂಜಯ್ ನೇಪಾಳ ಮೂಲದವನಾಗಿದ್ದು, ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.