ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದೆ. ರಾಜಧಾನಿ ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶ ಪಡೆದು ಇಂದು ಸಂಪೂರ್ಣ ನಗರವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಫ್ಘನ್ ಸರ್ಕಾರ ತಾಲಿಬಾನ್ ಶರಣಾಗಿದೆ.
Advertisement
ಕೆಲದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಇದೀಗ ತಾಲಿಬಾನಿಗಳು ರಾಜಧಾನಿ ಕಾಬೂಲ್‍ಗೆ ಪ್ರವೇಶಪಡೆದು ಆಫ್ಘನ್ ಸರ್ಕಾರದಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡಿದೆ. ಶಾಂತಿಯುತವಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ
Advertisement
Advertisement
ಸಂಪೂರ್ಣ ಆಫ್ಘಾನಿಸ್ತಾನವನ್ನು 7 ದಿನಗಳಲ್ಲಿ ವಶಪಡಿಸಿಕೊಳ್ಳುತ್ತೇವೆ ಎಂದು ತಾಲಿಬಾನಿಗಳು ಘೋಷಿಸಿದ ಬೆನ್ನಲ್ಲೇ ದಾಳಿ ತೀವ್ರಗೊಂಡು ಕಾಬೂಲ್‍ನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶಿಸುತ್ತಿದ್ದಂತೆ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಏರ್‍ಲಿಫ್ಟ್ ಮೂಲಕ ಸ್ಥಾಳಾಂತರಿಸಿತು. ಅಫ್ಘನ್ ಭದ್ರತಾ ಪಡೆಗಳು ಮತ್ತು ಅಂತಾರಾಷ್ಟ್ರೀಯ ಮಿತ್ರಪಡೆಯ ಸೈನಿಕರು ತಾಲಿಬಾನಿಗಳ ವಿರುದ್ಧ ಹೋರಾಡಿ ರಾಜಧಾನಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದರು ಅದು ವಿಫಲಗೊಂಡಿದೆ.
Advertisement
Multiple columns of smoke over US embassy Kabul. Staff burning sensitive documents on the way out. Blackhawks and Chinooks doing the rounds between the embassy and the airport. Taliban taking the surrounding areas to tighten the siege. #Kabul #Afghanistan pic.twitter.com/OmTfd7DyXr
— Asfandyar (@BhittaniKhannnn) August 15, 2021
90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚಾರ ಇಲಾಖೆ ಕಳೆದ ವಾರ ಭವಿಷ್ಯ ನುಡಿದಿತ್ತು. ಅದರಂತೆ ಇಂದು ಕಾಬೂಲ್ ಕೂಡ ತಾಲಿಬಾನ್ ವಶವಾಗಿದೆ.