– ಮನೆಯಲ್ಲಿ ಒಬ್ಬಳೇ ಇದ್ದೀನಿ ಎಂದಿದ್ದೆ ತಪ್ಪಾಯ್ತು
ಗಾಂಧಿನಗರ: ಕೃಷಿ ಮಾಲೀಕನೊಬ್ಬ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ನಡೆದಿದೆ.
ಅಹಮದಾಬಾದ್‍ನ ಪೊಲೀಸ್ ಠಾಣೆಯಲ್ಲಿ ಈ ಕುರಿತು ಶೂನ್ಯ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ರಾಂಚೋಡ್ ಅಹೀರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಕೃಷಿ ಕಾರ್ಮಿಕ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್ 16 ರಂದು ಆರೋಪಿ ತನ್ನ ಜಮೀನಿನ ಗುಡಿಸಲಿನಲ್ಲಿ ಮಹಿಳೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಸಂತ್ರಸ್ತೆ ಮತ್ತು ಆಕೆಯ ಪತಿ 2019ರ ಡಿಸೆಂಬರ್‌ನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಕಚ್‍ನ ಅಜ್ನರ್ ತಾಲೂಕಿಗೆ ಬಂದಿದ್ದರು. ಲಾಕ್‍ಡೌನ್ ನಂತರ ದಂಪತಿ ಮತ್ತು ಇತರ ಇಬ್ಬರು ಸಂಬಂಧಿಕರು ಮೇ 25 ರಂದು ಆರೋಪಿ ಅಹೀರ್ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಅವರೆಲ್ಲರೂ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಸೆಪ್ಟೆಂಬರ್ 16 ರಂದು ಸಂಜೆ ನನ್ನ ಪತಿ ಹಳ್ಳಿಗೆ ಹೋಗಿದ್ದರು. ಆದರೆ ಅವರ ಫೋನನ್ನು ನನಗೆ ಕೊಟ್ಟು ಹೋಗಿದ್ದರು. ಈ ವೇಳೆ ರಾಂಚೋಡ್ ಪತಿಯ ಫೋನ್‍ಗೆ ಕರೆ ಮಾಡಿ ಸ್ವಲ್ಪ ಕೆಲಸ ಮಾಡಬೇಕೆಂದು ಕೇಳಿದನು. ಆಗ ನಾನು, ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ. ನನ್ನ ಪತಿ ಹಿಂದಿರುಗಿದ ನಂತರ ಬಂದು ಕೆಲಸ ಮಾಡುತ್ತೇವೆ ಎಂದು ಹೇಳಿದೆ. ಸ್ವಲ್ಪ ಸಮಯದ ನಂತರ ರಾಂಚೋಡ್ ಸ್ವಲ್ಪ ಹಾಲು ತೆಗೆದುಕೊಂಡು ನನ್ನ ಗುಡಿಸಲಿಗೆ ಬಂದನು. ಬಳಿಕ ಆ ಹಾಲನ್ನು ತನಗೆ ಕೊಡಬೇಕೆಂದು ಹೇಳಿದನು. ಅಲ್ಲದೆ ಬಲವಂತವಾಗಿ ನನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನನ್ನ ಪತಿ ಮನೆಗೆ ಬಂದ ತಕ್ಷಣ ನಡೆದ ಘಟನೆಯ ಬಗ್ಗೆ ತಿಳಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಮರುದಿನ ದಂಪತಿ ಅಜ್ನರ್ ಬಸ್ ನಿಲ್ದಾಣಕ್ಕೆ ಹೋಗಿ ತಮ್ಮ ಮೊಬೈಲ್ ಫೋನ್ ಅನ್ನು 1,500 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅದೇ ಹಣದಲ್ಲಿ ಗುಜರಾತ್‍ನ ದಾಹೋಡ್‍ನಲ್ಲಿರುವ ತಮ್ಮ ಮನೆಗೆ ಟಿಕೆಟ್ ಖರೀದಿಸಿದ್ದಾರೆ. ಅಲ್ಲಿ ಕಾರ್ಮಿಕರ ಸಂಘಟನೆ ಆರೋಪಿ ಅಹೀರ್ ವಿರುದ್ಧ ಎಫ್‍ಐಆರ್ ದಾಖಲಿಸಲು ಸಹಾಯ ಮಾಡಿದೆ. ಅಹಮದಾಬಾದ್‍ನ ಸಾಬರಮತಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ.