‘ತಲೆ’ ತಿಂದ ಸಂಬರಗಿಯ ಬಾಯಿ ಮುಚ್ಚಿಸಿದ ಅರವಿಂದ್

Public TV
3 Min Read
prashanth sambaragi aravind kp

ಬಿಗ್ ಬಾಸ್ ಮನೆಯಲ್ಲಿ ಮತ್ತು ವೀಕ್ಷಕರ ನಡುವೆ ‘ನುಸುಳಿದ ಚೆಂಡು’ ಟಾಸ್ಕ್ ಬಗ್ಗೆ ಈಗಾಗಲೇ ಭಾರೀ ಚರ್ಚೆಗಳು ನಡೆದಿದೆ. ಈ ಟಾಸ್ಕ್‍ನಲ್ಲಿ ಅರವಿಂದ್ ಗೆದ್ದಿಲ್ಲ, ಪ್ರಶಾಂತ್ ಗೆದ್ದಿದ್ದಾರೆ, ಪ್ರಿಯಾಂಕ ಅವರ ವಾದ ಸರಿ ಇತ್ತು ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿತ್ತು.

ಮನೆಯಲ್ಲೂ, ಮನೆಯ ಹೊರಗಡೆ ಈ ಟಾಸ್ಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾದ ಹಿನ್ನೆಲೆಯಲ್ಲಿ ಈ ವಾರ ‘ಕಣ್ಮಣಿ’ ಈ ವಿಚಾರದ ಬಗ್ಗೆ ಜಾಸ್ತಿ ಮಾತನಾಡಿದ್ದಾಳೆ. ಕೊನೆಗೆ ಮಂಜು, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ್ ಅವರು ಮೊದಲೇ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ರೀತಿಯ ಗೊಂದಲ ಇರುತ್ತಿರಲಿಲ್ಲ. ಗೊಂದಲವಾದರೂ ಆಟಗಾರರ ಬಳಿ ಹೋಗಿ ಮತ್ತೊಮ್ಮೆ ಆಡುವಂತೆ ಮನವಿ ಮಾಡಿ ಒಪ್ಪಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅಂಪೈರ್‍ಗಳಾದವರೂ ಯಾವುದೇ ಪ್ರಯತ್ನ ಮಾಡದೇ ಗೊಂದಲ ಮೂಡಿಸಿದರು ಎಂದು ಹೇಳಿ ತನ್ನ ಅಂತಿಮ ತೀರ್ಪು ಹೇಳಿದಳು.

aravind kp chakaravrthy chandrachud prashanth

ಕಣ್ಮಣಿ ಹೇಳಿದ ಬಳಿಕ ಮನೆಯ ಗಾರ್ಡನ್ ಏರಿಯಾದಲ್ಲಿ ಅರವಿಂದ್, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಕುಳಿತು ಆ ಆಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಪ್ರಶಾಂತ್,”ನಾನು ತಲೆಯ ಬಗ್ಗೆ ಹೇಳಿದ ಮಾತನ್ನು ಬಿಗ್ ಬಾಸ್ ಒಪ್ಪಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಅರವಿಂದ್,”ನೀವು ಆಟ ಆಡುವ ಮೊದಲು ಇದನ್ನು ಕೇಳಬೇಕಿತ್ತು. ಆಟ ಆಡಿದ ನಂತ್ರ ಕೇಳುವುದಲ್ಲ. ತಲೆ ಎಂಬುದಕ್ಕೆ ಬಿಗ್ ಬಾಸ್ ಸ್ಪಷ್ಟವಾಗಿ ತಿಳಿಸಿಲ್ಲ. ಅದನ್ನು ನಮ್ಮ ವಿವೇಚನೆಗೆ ಬಿಟ್ಟಿದ್ದಾರೆ. ತಲೆ ಅಂದ್ರೆ ‘ಇದು ಮಾತ್ರ’ ಎಲ್ಲಿ ಹೇಳಿದ್ದಾರೆ” ಅಂತ ಪ್ರಶ್ನಿಸಿದರು. ಇದಕ್ಕೆ ಸಂಬರಗಿ ಸಮರ್ಥನೆ ನೀಡುವ ಪ್ರಯತ್ನ ಮಾಡಿದರೂ ಕೊನೆಗೆ ನಾನು ಹೇಳಿದ್ದಕ್ಕೆ ಬಿಗ್ ಬಾಸ್ ಹಿಂಟ್ ನೀಡಿದ್ದಾರೆ ಅಂತ ಉತ್ತರಿಸಿದರು.

aravind chakravarthy prashnath

ಹಿಂಟ್ ಎಂಬ ಉತ್ತರ ಕೇಳಿದ ಕೂಡಲೇ ಅರವಿಂದ್,”ತಲೆ ಅಂದ್ರೆ ಕೂದಲು ಇರುವ ಜಾಗ ಮಾತ್ರ ಅಂತ ಹೇಳಿದ್ರಾ?” ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಚಕ್ರವರ್ತಿ,”ಈ ಹಿಂಟ್ ತಗೊಂಡೆ ಇಷ್ಟು ದಿನ ನೀನು ತಪ್ಪಾಗಿದ್ದು. ಅವರು ತಲೆ ಎಂಬುದಕ್ಕೆ ಏನೂ ಹೇಳಿಲ್ಲ” ಎಂದು ಸಂಬರಗಿಗೆ ತಿಳಿಸುವ ಪ್ರಯತ್ನ ಮಾಡಿದರು. ಅರವಿಂದ್ ಮತ್ತು ಚಕ್ರವರ್ತಿ ತನ್ನ ವಾದವನ್ನು ಒಪ್ಪುವುದಿಲ್ಲ ಎಂಬುದು ಯಾವಾಗ ಸಂಬರರಗಿಗೆ ಗೊತ್ತಾಯಿತೋ ಕೂಡಲೇ ಸಂಬರಗಿ, “ಸಾಕು ಈ ವಿಚಾರ ಇವತ್ತು. ಊಟಕ್ಕೆ ಏನು” ಎಂದು ಪ್ರಶ್ನಿಸಿ ಮಾತುಕತೆಯನ್ನು ಬೇರೆ ಕಡೆ ತಿರುಗಿಸುವ ಪ್ರಯತ್ನ ಮಾಡಿದರು.

aravind priyanka prashanth

ಸಂಬರಗಿಯಿಂದ ಈ ಉತ್ತರ ಕೇಳಿದ ಕೂಡಲೇ ಅರವಿಂದ್ ಮತ್ತು ಚಕ್ರವರ್ತಿ ನಕ್ಕರು. ಕೊನೆಗೆ ಅರವಿಂದ್,”ನೀವು ಹಿಂಗೆ ಮಾತನಾಡಿದ್ರೆ ನಿಮಗೆ ತಲೆ ಇಲ್ಲ ಅಂತ ಅರ್ಥ. ನಿಮಗೆ ತಲೆ ಇದೆ. ಈ ವಿಷಯ ಮುಗಿದು ಹೋಯ್ತು ಅಷ್ಟೇ ಫಿನೀಶ್” ಎಂದು ಹೇಳಿ ಈ ಮಾತುಕತೆಯನ್ನು ಕೊನೆಗೊಳಿಸಿದರು.

ಸಂಬರಗಿ ಮತ್ತು ಅರವಿಂದ್ ಬಿಗ್ ಬಾಸ್ ಮನೆಯಲ್ಲೇ ಎಷ್ಟೇ ಕಿತ್ತಾಡಿದರೂ ಕೊನೆಗೆ ಒಂದಾಗುತ್ತಾರೆ. ಈ ಹಿಂದೆಯೂ ನಾವಿನೇಷನ್ ಸಮಯದಲ್ಲಿ ಅರವಿಂದ್ ಪ್ರಶಾಂತ್ ಅವರು ಇರಬೇಕು ಎಂದು ಹೇಳಿದ್ದರು.

aravind priyanka

ತಲೆ ಬಗ್ಗೆ ಚರ್ಚೆಯಾದ ನಂತರ ಕಿಚನ್ ರೂಮಿನಲ್ಲಿ ಅರವಿಂದ್ ಪ್ರಶಾಂತ್ ಅವರಲ್ಲಿ,”ನೀವು ಹೇಳುವುದು ಸರಿ ಇದೆ. ಆದರೆ ಹೇಳುವ ಶೈಲಿ ಮಾತ್ರ ಸರಿಯಿಲ್ಲ. ಅದರಿಂದಾಗಿ ಕಿರಿಕ್ ಆಗುತ್ತದೆ. ಜೊತೆಗೆ ನೀವು ಹೇಳಿದ್ದೆ ಸರಿ ಎಂಬುದನ್ನು ಬಿಟ್ಟು ಉಳಿದವರು ಏನು ಹೇಳುತ್ತಾರೆ ಎಂಬದುನ್ನು ಕೇಳಬೇಕು” ಎಂದು ಸಲಹೆ ನೀಡಿದರು.

ಒಟ್ಟಿನಲ್ಲಿ ‘ನುಸುಳುವ ಚೆಂಡು’ ಟಾಸ್ಕ್‍ನಿಂದ ಎದ್ದ ತಲೆ ಎಂದರೇನು ಪ್ರಶ್ನೆ ಬಿಗ್ ಬಾಸ್ ಮನೆಯವರ ಜೊತೆ ವೀಕ್ಷಕರ ತಲೆಯನ್ನು ತಿಂದಿದೆ. ತಲೆ ತಿಂದ ಟಾಸ್ಕ್ ಬಗ್ಗೆ ಈಗ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಕಮೆಂಟ್ ಮಾಡಿ ತಿಳಿಸಿ.

Share This Article