ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್-29ಕೆ ತರಬೇತುದಾರ ವಿಮಾನವು ಅರಬ್ಬಿ ಸಮುದ್ರದಲ್ಲಿ ಗುರುವಾರ ಅಪಘಾತಕ್ಕೀಡಾಗಿದ್ದು, ಓರ್ವ ಪೈಲಟ್ ಕಾಣೆಯಾಗಿದ್ದಾರೆ.
ಭಾರತೀಯ ನೌಕಾಪಡೆಯ ಮಾಹಿತಿ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯಿಂದ ಕಾರ್ಯನಿರ್ವಹಿಸುತ್ತಿರುವ ಮಿಗ್-29ಕೆ ತರಬೇತುದಾರ ವಿಮಾನವು ನವೆಂಬರ್ 26ರಂದು ಸಂಜೆ 5 ಗಂಟೆಗೆ ಅಪಘಾತಕ್ಕೀಡಾಗಿದೆ. ಈ ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳ ಪೈಕಿ ಒಬ್ಬರು ಸಿಕ್ಕಿದ್ದು, ಇನ್ನೊಬ್ಬರು ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದೆ.
Advertisement
A MiG-29K trainer ac operaring over sea reported ditched at about 1700h/ 26 Nov 20. One pilot recovered. SAR (Search & Rescue) operation in progress to look for the 2nd pilot. #IN has instituted an inquiry to look into cause of accident @indiannavy (rep pic) pic.twitter.com/LKxOyKmTRL
— Captain DK Sharma (@CaptDKS) November 27, 2020
Advertisement
ಈ ಅಪಘಾತದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ. ಕಳೆದ ವರ್ಷ ನವೆಂಬರಿನಲ್ಲಿ ಪಕ್ಷಿಯೊಂದು ವಿಮಾನಕ್ಕೆ ಬಡಿದ ಕಾರಣ ಗೋವಾದಲ್ಲಿ ನೌಕಾಪಡೆಯ ಮಿಗ್-29ಕೆ ಯುದ್ಧವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು. ಭಾರತೀಯ ನೌಕಪಡೆಯು 40 ಮಿಗ್-29ಕೆ ಯುದ್ಧ ವಿಮಾನಗಳನ್ನು ಹೊಂದಿದ್ದು, ಅವು ಗೋವಾ ಮತ್ತು ಅರಬ್ಬಿ ಸಮುದ್ರದಲ್ಲಿ ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯ ಜೊತೆ ಕಾರ್ಯನಿರ್ವಹಿಸುತ್ತವೆ.