– ಬೇರೆ ಪ್ರಾಣಿಗಳು ದಾಳಿ ಮಾಡದಂತೆ ರಕ್ಷಣೆ
ವೃದ್ಧ ಭಿಕ್ಷುಕರೊಬ್ಬರು ಬೀದಿ ನಾಯಿಗಳಿಗೆ ತನ್ನದೇ ಪ್ಲೇಟಿನಲ್ಲಿ ಊಟ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವೃದ್ಧನ ಮಾನವೀಯ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.
Poor by wealth…
Richest by heart ???? pic.twitter.com/OlMsYORNI2
— Susanta Nanda (@susantananda3) July 16, 2020
Advertisement
ಈ ವಿಡಿಯೋವನ್ನು ಅರಣ್ಯಾಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಸಂಪತ್ತಿನಲ್ಲಿ ಬಡವರಾದರೂ ಹೃದಯದಿಂದ ಶ್ರೀಮಂತರು ಎಂದು ಬರೆದುಕೊಂಡಿದ್ದಾರೆ.
Advertisement
ವೃದ್ಧ ಭಿಕ್ಷಕರೊಬ್ಬರು ತನ್ನ ಪ್ಲೇಟಿನಲ್ಲಿ ಬೀದಿ ನಾಯಿಗಳಿಗೆ ಊಟ ನೀಡುತ್ತಾರೆ. ಅಲ್ಲದೆ ಬೇರೆ ಪ್ರಾಣಿಗಳು ದಾಳಿ ಮಾಡದಂತೆ ಅಲ್ಲಿಯೇ ಪಕ್ಕದಲ್ಲಿ ಕುಳಿತುಕೊಂಡಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೃದ್ಧನ ಮಾನವೀಯತೆಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಇದೂವರೆಗೆ ವಿಡಿಯೋ 46 ಸಾವಿರ ಬಾರಿ ವೀಕ್ಷಣೆಯಾಗಿದೆ.
Advertisement
I have no words left to applaud this Rich man at ????.He deserves a better life.
— Manie Krishnan (@ManieKrishnan) July 16, 2020
Advertisement
ಕನಿಕರ ಅಥವಾ ಅನುಕಂಪ ಎಂಬುದು ಮರೀಚಿಕೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ವೃದ್ಧನ ಕಾರ್ಯಕ್ಕೆ ನಾವು ಸೆಲ್ಯೂಟ್ ಹೊಡೆಯಲೇ ಬೇಕು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು, ತನ್ನ ಹಸಿವು ನೀಗದಿದ್ದರೂ ತನ್ನ ಪಾಲಿನಲ್ಲೇ ಕೊಂಚ ಉಳಿಸಿ ಅದನ್ನು ನಾಯಿಗಳಿಗೆ ಹಂಚಿದ್ದು ನಿಜಕ್ಕೂ ಕಣ್ಣೀರಿ ತರುಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
Compassion has become so scarce these days. Salute this elderly man ????????
— Dharini Ramachandra (@Earth_N_essence) July 16, 2020