ತನ್ನ ಕೈಯಾರೆ ಶ್ವಾನಕ್ಕೆ ನೀರು ಕುಡಿಸಿದ ಅಜ್ಜನ ವಿಡಿಯೋ ವೈರಲ್

Public TV
1 Min Read
dog old man

– ವೃದ್ಧನ ಮಾನವೀಯ ಗುಣಕ್ಕೆ ನೆಟ್ಟಿಗರು ಫಿದಾ

ನವದೆಹಲಿ: ಇತ್ತೀಚೆಗಷ್ಟೇ ವೃದ್ಧ ಭಿಕ್ಷುಕರೊಬ್ಬರು ತನ್ನದೇ ಪ್ಲೇಟಿನಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಿ ನೆಟ್ಟಿಗರ ಮನ ಗೆದ್ದಿದ್ದರು. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ವೃದ್ಧನ ಮಾನವೀಯತೆಗೆ ಸಾಮಾಜಿಕ ಜಾಲತಾಣಿಗರು ಫಿದಾ ಆಗಿದ್ದಾರೆ.

download 2

ಹೌದು. ವೃದ್ಧರೊಬ್ಬರು ನಳ್ಳಿಯಿಂದ ತನ್ನ ಕೈಯಾರೆ ನೀರು ತೆಗದುಕೊಂಡು ಬಂದು ಶ್ವಾನಕ್ಕೆ ಕುಡಿಸಿದ್ದಾರೆ. ಇದನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

18 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ವೃದ್ಧರೊಬ್ಬರು ಶ್ವಾನಕ್ಕೆ ನೀರು ಕುಡಿಯಲು ಸಹಾಯ ಮಡುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿರುವ ನಳ್ಳಿಯಿಂದ ಬೊಗಸೆ ತುಂಬಾ ನೀರು ತೆಗೆದುಕೊಂಡು ಬಂದು ಶ್ವಾನಕ್ಕೆ ಕುಡಿಸಿದ್ದಾರೆ. ಅದು ಮುಗಿದ ಬಳಿಕ ಮತ್ತೆ ಅದೇ ರೀತಿ ನೀರು ಕುಡಿಸುವ ಮೂಲಕ ಶ್ವಾನದ ಬಾಯಾರಿಕೆಯನ್ನು ನೀಗಿಸಿದ್ದಾರೆ.

download 1 1

ಈ ವಿಡಿಯೋವನ್ನು ಸುಶಾಂತ್ ತಮ್ಮ ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡಿಕೊಂಡು, ಮಾನವೀಯತೆ ಹೃದಯದಲ್ಲಿದೆ, ನಾವಿರುವ ಸ್ಥಿತಿಯಲ್ಲಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ 11 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಹಲವು ಮಂದಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತನ್ನ ಪ್ಲೇಟಿನಲ್ಲಿಯೇ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ- ವಿಡಿಯೋ ವೈರಲ್

ವೃದ್ಧನ ಮಾನವೀಯತೆಗೆ ಮಾರು ಹೋಗಿರುವ ನೆಟ್ಟಿಗರು, ಮಾನವೀಯತೆ ಅಂದರೆ ಇದು ಅಂತ ಕೆಲವರು ಅಂದರೆ, ಇನ್ನೂ ಕೆಲವರು ಈ ವಿಡಿಯೋ ನೋಡಿದ ಮೇಲೆ ಬರೆಯಲು ಪದಗಳೇ ಸಿಗುತ್ತಿಲ್ಲ ಎಂದು ಎರಡು ಕೈ ಜೋಡಿಸಿ ಮುಗಿಯುವ ಸಿಂಬಲ್ ಹಾಕಿದ್ದಾರೆ.

Share This Article