ತಂದೆಯ ಸರ್ಕಾರದಲ್ಲಿ ಮಗನಿಂದ ಖಾತೆ ಹಂಚಿಕೆಯಾಯ್ತಾ?

Public TV
1 Min Read
BSY VIJAYENDRA

– ಬಿಜೆಪಿ ಪಡಸಾಲೆಯಿಂದ ಗಂಭೀರ ಆರೋಪ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಆಡಳಿತದಲ್ಲಿ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಾರೆ ಅನ್ನೋ ಆರೋಪಗಳನ್ನ ಬಿಜೆಪಿಯ ಶಾಸಕರು ಮಾಡುತ್ತಿದ್ದಾರೆ. ರಾತ್ರೋರಾತ್ರಿ ಖಾತೆಗಳ ಪುನರ್ ಹಂಚಿಕೆಯನ್ನ ಬಿ.ವೈ.ವಿಜಯೇಂದ್ರ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಬಿಜೆಪಿ ಪಡಸಾಲೆಯಿಂದಲೇ ಕೇಳಿ ಬರುತ್ತಿದೆ.

vijayendra 1

ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಸಿಎಂ ಕುಟುಂಬ ಹಸ್ತಕ್ಷೇಪದ ಬಗ್ಗೆ ಕೋರ್ ಕಮಿಟಿ ಸದಸ್ಯರೇ ದೂರು ನೀಡಿದ್ದರು. ದೂರು ಪಡೆದ ನಂತರ ಸಿಎಂ ಜೊತೆ ಮಾತಾಡಿದ್ದ ಆಡಳಿತದಿಂದ ಪುತ್ರ, ಕುಟುಂಬ ದೂರ ಇಡಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಆದ್ರೆ ಇದೀಗ ವಿಜಯೇಂದ್ರ ನಿರ್ಧಾರದಂತೆಯೇ ಖಾತೆಗಳ ಪುನರ್ ಹಂಚಿಕೆ ಆಗಿದೆ ಎಂಬ ಮಾತುಗಳು ಕೇಸರಿ ಮನೆಯಲ್ಲಿ ಕೇಳಿ ಬರುತ್ತಿವೆ.

BY Vijayendra

ಫೋನ್ ಸ್ವಿಚ್ಛ್ ಆಫ್: ರಾತ್ರಿ ರಾಜಭವನಕ್ಕೆ ಪಟ್ಟಿ ರವಾನೆ ಆಗಿರೋ ವಿಷಯ ಲೀಕ್ ಆಗ್ತಿದ್ದಂತೆ ಪ್ರಮುಖ ಖಾತೆ ಕಳೆದುಕೊಂಡ ಸಚಿವರು ವಿಜಯೇಂದ್ರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಅಂಕಿತಕ್ಕೂ ಮುನ್ನ ಖಾತೆಗಳನ್ನ ಉಳಿಸಿಕೊಳ್ಳಲು ಸಾಹಸಕ್ಕೆ ಸಚಿವರು ಕೊನೆಯ ಪ್ರಯತ್ನದಲ್ಲಿದ್ದು, ಆದ್ರೆ ವಿಜಯೇಂದ್ರ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಸಚಿವರು ಸೇಫ್: ಖಾತೆಗಳ ಪುನರ್ ಹಂಚಿಕೆ ಮಾಡಿರೋ ಮುಖ್ಯಮಂತ್ರಿಗಳು ಹಿರಿಯ ಸಚಿವರ ತಂಟೆಗೆ ಹೋಗಿಲ್ಲ. ಮೂವರು ಡಿಸಿಎಂಗಳು, ಶೆಟ್ಟರ್, ಅಶೋಕ್, ಈಶ್ವರಪ್ಪ, ರಾಮುಲು ಖಾತೆಗಳು ಭದ್ರವಾಗಿವೆ. ಈಗಿರುವ ಖಾತೆಗಳಲ್ಲಿಯೇ ಬೊಮ್ಮಾಯಿ, ಸುರೇಶ್ ಕುಮಾರ್, ಸೋಮಣ್ಣ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಇತ್ತ ಮಿತ್ರಮಂಡಳಿಯ ರಮೇಶ್ ಜಾರಕಿಹೊಳಿ, ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್ ಅವರ ಖಾತೆಯಲ್ಲಿಯೂ ಬದಲಾಗಿಲ್ಲ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *