– ಗೂಗಲ್ ಪೇ ಮೂಲಕ ಹಣವರ್ಗಾವಣೆ
ಪುಣೆ: ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ತರಬೇತುದಾರನೊಬ್ಬ ಮಹಿಳಾ ಟೆಕ್ಕಿಯಿಂದ 2.5 ಲಕ್ಷ ರೂ. ದೋಚಿರುವ ಘಟನೆ ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದಿದೆ.
ಶ್ರೀದೇವಿ ರಾವ್(35) ಅವರನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದ ಫೋನ್ ಮೂಲಕ ಹಣವನ್ನು ಆರೋಪಿ ವರ್ಗಾಯಿಸಿಕೊಂಡಿದ್ದಾನೆ. ಎಟಿಎಂ ಕಾರ್ಡ್ ನಿಂದ ಹಣವನ್ನು ತೆಗೆದಿದ್ದಾನೆ. ಟೆಕ್ಕಿ ಧರಿಸಿದ್ದ ಚಿನ್ನಾಭರಣವನ್ನು ಸಹ ಲೂಟಿ ಮಾಡಿದ್ದಾನೆ. ನಗದು ಮತ್ತು ಚಿನ್ನಾಭರಣ ಒಟ್ಟು ಸೇರಿಸಿ 2.5 ಲಕ್ಷ ರೂ. ಮೊತ್ತವನ್ನು ದೋಚಿದ್ದಾನೆ ಎಂದು ಟೆಕ್ಕಿ ಆರೋಪ ಮಾಡಿದ್ದಾರೆ.


ದೂರಿನಲ್ಲಿ ಏನಿದೆ?
ರಾಜೇಶ್ ಸಿಂಗ್ ಡ್ರೈವಿಂಗ್ ಹೇಳಿ ಕೊಡುವ ನೆಪದಲ್ಲಿ ತನ್ನ ಸ್ನೇಹಿತರೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಕೊಂಡು ಹೋಗಿ ಗೂಗಲ್ ಪೇ ಮೂಲಕ 40 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂ ಕಾರ್ಡ್‍ನಿಂದ 10 ಸಾವಿರ ರೂ. ಗಳನ್ನು ತೆಗೆದುಕೊಂಡಿದ್ದು ಅಲ್ಲದೇ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾನೆ. ನನ್ನ ಕೈಗಳನ್ನು ಕಟ್ಟಿ ಹಣವನ್ನು ಫೋನ್ ಮೂಲಕ ವರ್ಗಾಯಿಸಬೇಕೆಂದು ಒತ್ತಾಯಿಸಿ ಮೊಬೈಲ್ಫೋನ್ ಕಸಿದುಕೊಂಡನು. ಅಗತ್ಯವಿರುವ ಎಲ್ಲಾ ಪಾಸ್‍ವರ್ಡ್‍ಗಳ ನನ್ನಿಂದ ಪಡೆದುಕೊಂಡು ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಟೆಕ್ಕಿ ದೂರು ನೀಡಿದ್ದಾನೆ.


