ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ಗರಂ ಆಗಿದ್ದು, ಇದೀಗ ಇವರ ಬೆನ್ನಿಗೆ ಶೃತಿ ಹರಿಹರನ್ ಕೂಡ ನಿಂತಿದ್ದಾರೆ.
ನಟಿ ಪಾರೂಲ್ ಆಕ್ರೋಶ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್ ಅನ್ನು ಸೃಇ ತಮ್ಮ ಇನ್ಸ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿಕೊಂಡು ಕೈ ಮುಗಿದಿದ್ದಾರೆ. ಅಲ್ಲದೆ ಒಳ್ಳೆಯ ಮಾತುಗಳನ್ನಾಡಿದ್ದೀರಿ. ನಮ್ಮಲ್ಲಿ ಹಲವರು ಒಂದೇ ರೀತಿಯ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಪಾರೂಲ್ ಹೇಳಿದ್ದೇನು..?
ಅಂತಿಮವಾಗಿ ಲಿಂಗ ಸಮಾನತೆ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಮಾದಕ ವಸ್ತುಗಳ ವಿರುದ್ಧ ನಾನು ಸೇರಿದಂತೆ ಎಲ್ಲರೂ ಹೋರಾಡಬೇಕು. ಆದರೆ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ಮಹಿಳೆಯರು ಮಾತ್ರನಾ?, ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ವಾ ಎಂದು ಪ್ರಶ್ನೆ ಮಾಡಿದ್ದರು.
ಯಾವುದೇ ಕಾರ್ಪೋರೇಟರ್ ಸಿಬ್ಬಂದಿ, ವ್ಯಾಪಾರಸ್ಥರು, ಕ್ರೀಡಾಪಟುಗಳು ಅಥವಾ ನಟರು ಸಹ ಡ್ರಗ್ಸ್ ಧಂದೆಯಲ್ಲಿ ಭಾಗಿಯಾಗಿಲ್ವಾ? ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ? ಅಥವಾ ನಮ್ಮಲ್ಲಿ ಕೆಲವರನ್ನು ಮಾತ್ರ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ ಎಂದು ಡ್ರಗ್ಸ್ ದಂಧೆ ಬಗ್ಗೆ ನಟಿ ಪಾರುಲ್ ಯಾದವ್ ಪ್ರಶ್ನಿಸಿದ್ದರು.
ರಾಗಿಣಿ, ಸಂಜನಾ ಬಂಧನ:
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ನಂತರ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಈ ವೇಳೆ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ.
ಇತ್ತ ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್‍ಐಆರ್‍ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್‍ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.