– ಸಹೋದರನ ಗೆಳೆಯನಿಂದ್ಲೂ ಅತ್ಯಾಚಾರ
– ಮನೆ ಬಾಡಿಗೆಗಿದ್ದ ವ್ಯಕ್ತಿಯೂ ರೇಪ್ ಮಾಡ್ದ
ಚಂಡೀಗಢ: ಡ್ರಗ್ಸ್ ಗೆ ದಾಸನಾಗಿದ್ದ ಅಣ್ಣ ಹಾಗೂ ಆತನ ಗೆಳೆಯ ಅತ್ಯಾಚಾರ ಎಸಗಿದ್ದರಿಂದ ಅಪ್ರಾಪ್ತೆಯೊಬ್ಬಳು ಗರ್ಭವತಿ ಆದ ವಿಲಕ್ಷಣ ಘಟನೆಯೊಂದು ಚಂಡೀಘಡದಲ್ಲಿ ನಡೆದಿದೆ.
Advertisement
ಸೆಪ್ಟೆಂಬರ್ 23ರಂದು 15 ವರ್ಷದ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ತನಿಖೆ ನಡೆಸಿದಾಗ ಮಾದಕ ದ್ರವ್ಯ ವ್ಯಸನಿ 19 ವರ್ಷದ ಅಣ್ಣನೇ ಅತ್ಯಾಚಾರವೆಸಗಿರುವುದು ತಿಳಿದುಬಂದಿದೆ. ಬಾಲಕಿಯ ತಾಯಿಗೆ ಕಣ್ಣು ಕಾಣದಿದ್ದರಿಂದ ಆಕೆಗೆ ಏನೂ ತಿಳಿದಿರಲಿಲ್ಲ. ಇದನ್ನೇ ಉಪಯೋಗಿಸಿಕೊಂಡ ಆರೋಪಿಗಳು ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ.
Advertisement
Advertisement
ಬಾಲಕಿ 9 ನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಈಕೆ ಒಂದು ದಿನ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ಬಾಲಕಿ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾಳೆ. ಬಾಲಕಿಯನ್ನು ಪರೀಕ್ಷೆ ನಡೆಸಿ ವೈದ್ಯರು 8 ತಿಂಗಳ ಗರ್ಭಿಣಿಯಾಗಿರುವ ವಿಚಾರ ತಿಳಿಸಿದ್ದಾರೆ. ಕೂಡಲೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಇತ್ತ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಹಾಯವಾಣಿಗಳ ಆರೈಕೆಗೆ ಬಾಲಕಿಯನ್ನು ಕಳುಹಿಸಿ ಕೊಡಲಾಯಿತು.
Advertisement
ಪೊಲೀಸರ ಬಳಿ ವಿವರಿಸಿದ ಬಾಲಕಿ:
ತನಿಖೆಯ ವೇಳೆ ಬಾಲಕಿ ಪೊಲೀಸರ ಬಳಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಸಹೋದರ ಡ್ರಗ್ಸ್ ವ್ಯಸನಿಯಾಗಿದ್ದು, ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊದಲ ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದನು. ಆ ನಂತರ ಅನೇಕ ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದನು. ಇಷ್ಟು ಮಾತ್ರವಲ್ಲದೆ ಆತನ 25 ವರ್ಷದ ಗೆಳೆಯನೊಬ್ಬ ಕೂಡ ಪ್ರತಿನಿತ್ಯ ಮನೆಗೆ ಬರುತ್ತಿದ್ದು, ಈ ವರ್ಷ ಜನವರಿ ತಿಂಗಳಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದನು.
ಇದೇ ವೇಳೆ ಇನ್ನೊಂದು ವಿಚಾರವನ್ನು ಕೂಡ ಬಾಲಕಿ ಬಹಿರಂಗ ಪಡಿಸಿದ್ದಾಳೆ. ತಮ್ಮ ಮನೆಯಲ್ಲಿ ಮೂರು ತಿಂಗಳು ಬಾಡಿಗೆಗಿದ್ದ 51 ವರ್ಷದ ವ್ಯಕ್ತಿ ಕೂಡ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂಬುದನ್ನು ರಿವೀಲ್ ಮಾಡಿದ್ದಾಳೆ. ಘಟನೆ ಸಂಬಂಧ ಬಾಲಕಿಯ ಸಹೋದರಿ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.