– ಸೌಂದರ್ಯ ಹೆಚ್ಚಿಸಿಕೊಳ್ಳಲು ಡ್ರಗ್ಸ್ ಹಿಂದೆ ಬಿದ್ದಿದ್ದ ನಟಿಯರು
ಬೆಂಗಳೂರು: ಡ್ರಗ್ಸ್ ಕಸ್ಟಮರ್ಸ್ ಗಳಲ್ಲಿ ನಟರಿಗಿಂತ ನಟಿಯರೇ ಹೆಚ್ಚು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಡ್ರಗ್ ಡೀಲರ್ ಅನೂಪ್ ಬಾಯ್ಬಿಟ್ಟಿದ್ದಾನೆ.
ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ದಂಧೆಯ ಘಾಟು ಜೋರಾಗಿ ಬರುತ್ತಿದೆ. ಗುರುವಾರ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ ಮೂವರು ಹೈಟೆಕ್ ಡ್ರಗ್ ಪೆಡ್ಲರ್ ಗಳು ವಿಚಾರಣೆ ವೇಳೆ ಒಂದೇ ಒಂದೇ ಭಯಾನಕ ಸತ್ಯವನ್ನು ಹೊರಹಾಕುತ್ತಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಮೂವರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು ದಿನ ಒಬ್ಬರಂತೆ ಡ್ರಿಲ್ ಮಾಡುತ್ತಿದ್ದಾರೆ. ಶುಕ್ರವಾರ ಕಿಂಗ್‍ಪಿನ್ ಅನಿಕಾಳನ್ನು ವಿಚಾರಣೆ ಮಾಡಲಾಗಿತ್ತು. ಅನಿಕಾ ತಾನು ಆರು ವರ್ಷದಿಂದ ಡ್ರಗ್ ಡೀಲರ್ ಆಗಿದ್ದು, ಕಾಲೇಜಿನಲ್ಲೇ ಡ್ರಗ್ ಸಪ್ಲೇ ಮಾಡುತ್ತಿದ್ದೆ. ಜೊತೆಗೆ ಸದ್ಯ ಕನ್ನಡದ ಸ್ಟಾರ್ ನಟಿ ತನ್ನ ಸಹಪಾಠಿ ಎಂಬ ವಿಚಾರವನ್ನು ಹೇಳಿದ್ದಳು. ಈಗ ಅನೂಪ್, ನಟರಿಗಿಂತ ನಟಿಯರೇ ಹೆಚ್ಚು ಡ್ರಗ್ ಖರೀದಿ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.
ಗುರುವಾರ ಅನಿಕಾ, ಅನೂಪ್ ಮತ್ತು ರೀಜೇಸ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಡ್ರಗ್ ಡೀಲರ್ಸ್ ಗಳು ಹಲವಾರು ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಯಾಂಡಲ್‍ವುಡ್‍ನ ಹಲವು ನಟಿಯರಿಗೆ ಎನ್‍ಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ.