Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

Public TV
Last updated: September 8, 2020 10:46 pm
Public TV
Share
3 Min Read
Rhea Chakraborty Sushant
SHARE

-ಜಾಮೀನು ಅರ್ಜಿ ವಜಾ, 14 ದಿನ ನ್ಯಾಯಾಂಗ ಬಂಧನ
-ರಿಯಾಗೆ ಮುಂಬೈ ಪೊಲೀಸರ ಸಾಥ್?
-ಡ್ರಗ್ಸ್ ಖರೀದಿಗೆ ಸುಶಾಂತ್ ಹಣ ಬಳಕೆ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಪ್ರೀತಿಸಿದ ತಪ್ಪಿಗೆ ನನ್ನ ಕಕ್ಷಿದಾರ ರಿಯಾ ಚಕ್ರವರ್ತಿಯ ಬಂಧನವಾಗಿದೆ. ಮೂರು ತನಿಖಾ ಏಜೆನ್ಸಿಗಳು ಓರ್ವ ಮಹಿಳೆ ಹಿಂದೆ ಬಿದ್ದಿವೆ. ಕಾರಣ ಆಕೆ ಓರ್ವ ಡ್ರಗ್ಸ್ ಅಡಿಕ್ಟ್ ನನ್ನು ಪ್ರೀತಿಸುತ್ತಿದ್ದಳು. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನಶಿಂಧೆ ಹೇಳಿದ್ದಾರೆ.

Rhea

ಇಂದು ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿ ಅವರನ್ನ ಎನ್‍ಸಿಬಿ ಬಂಧಿಸಿದ್ದು, ನ್ಯಾಯಾಲಯ 14 ದಿನದ ನ್ಯಾಯಾಂಗ ಬಂಧನಕ್ಕೆ ನೀಡಿದೆ. ವೈದ್ಯಕೀಯ ಪರೀಕ್ಷೆ ಬಳಿಕ ರಿಯಾರನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಎನ್‍ಸಿಬಿ ಆರೋಪಿ ರಿಯಾರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿತ್ತು.

#RheaChakraborty sent to 14-day judicial custody, court also rejected her bail plea.

She was arrested by Narcotics Control Bureau (NCB) today in drug case related to #SushantSinghRajput's death probe. pic.twitter.com/qy8qWfZg2h

— ANI (@ANI) September 8, 2020

ನ್ಯಾಯಾಂಗ ಬಂಧನದ ಬಳಿಕ ರಿಯಾ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿ ರಿಯಾ ಪ್ರಭಾವಿ ವ್ಯಕ್ತಿಯಾಗಿದ್ದು, ಇತರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಜಾಮೀನು ನೀಡಕೂಡದು ಎಂದು ಎನ್‍ಸಿವಿ ತನ್ನ ವಾದವನ್ನ ಮಂಡಿಸಿತ್ತು. ಇತ್ತ ರಿಯಾ ಪರ ವಕೀಲರು, ಕಕ್ಷಿದಾರರು ವಿಚಾರಣೆ ಸಂಪೂರ್ಣ ಸಹಕಾರ ನೀಡಿದ್ದು, ಅವಶ್ಯವಿದ್ದಲ್ಲಿ ಮತ್ತೆ ಹಾಜರಾಗುತ್ತಾರೆ. ಈ ಹಿನ್ನೆಲೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಅರ್ಜಿಯನ್ನ ವಜಾಗೊಳಿಸಿದೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

RHEA SUSHANT 1 medium

ಮೂರು ದಿನ ವಿಚಾರಣೆ ಹಾಜರಾಗಿದ್ದ ರಿಯಾ ತನಿಖೆಗೆ ಸಹಕಾರ ನೀಡಿದ್ದಾರೆ. ಹೀಗಾಗಿ ನಾವು ರಿಯಾರನ್ನ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಮಾಡಿಕೊಂಡಿದ್ದೇವೆ. ಮುಂದಿನ ತನಿಖೆವರೆಗೂ ರಿಯಾ ನ್ಯಾಯಾಂಗ ಬಂಧನದಲ್ಲಿರೋದು ಸೂಕ್ತ ಎಂದು ಎನ್‍ಸಿಬಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ. ಇತ್ತ ವಿಚಾರಣೆ ವೇಳೆ ರಿಯಾ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

Sushant Singh Rajput 2

ಡ್ರಗ್ಸ್ ಎಲ್ಲಿ ಮತ್ತು ಯಾರಿಂದ ಖರೀದಿಸಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಕೇವಲ ಸುಶಾಂತ್‍ಗೆ ಮಾತ್ರವಲ್ಲದೇ ಹಲವರಿಗಾಗಿ ರಿಯಾ ಡ್ರಗ್ಸ್ ಖರೀದಿಸುತ್ತಿದ್ದರು. ಡ್ರಗ್ಸ್ ಖರೀದಿಗಾಗಿ ಸುಶಾಂತ್ ಖಾತೆಯಿಂದ ಹಣ ಪಾವತಿಸಲಾಗುತ್ತಿತ್ತು. ಡ್ರಗ್ಸ್ ಸಿಂಡಿಕೇಟ್ ನಲ್ಲಿ ರಿಯಾ ಸದಸ್ಯೆ ಆಗಿದ್ದರು ಎಂಬ ಆರೋಪಗಳನ್ನ ರಿಯಾ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

Rhea 1

ಆರಂಭದಲ್ಲಿ ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ರಿಯಾಗೆ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪಗಳು ಸಹ ಕೇಳಿಬಂದಿವೆ. ಈ ಹಿನ್ನೆಲೆ ರಿಯಾರನ್ನ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಅಂಕಿತಾ ಲೋಖಂಡೆ ಪೋಸ್ಟ್ ಗೆ ರಮ್ಯಾ ಪ್ರತಿಕ್ರಿಯೆ

sushant singh rajput 75 1

ಜೂನ್ 14ರಂದು ಸುಶಾಂತ್ ಮೃತದೇಹ ಅವರ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್, ಇದೊಂದು ಪಕ್ಕಾ ಪೂರ್ವಯೋಜಿತ ಕೊಲೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಮಹಾರೋಗಕ್ಕೆ ಸುಶಾಂತ್ ಬಲಿಯಾಗಿದ್ದಾರೆ ಎಂದು ಆರೋಪಿಸಿ ಧ್ವನಿ ಎತ್ತಿದ್ದರು. ತದನಂತರ ಸಾವಿನ ಬಗ್ಗೆ ಮತ್ತು ಮುಂಬೈ ಪೊಲೀಸರ ತನಿಖೆಯ ಕುರಿತು ಅನುಮಾನಗಳು ವ್ಯಕ್ತವಾಗಿದ್ದರು. ಇತ್ತ ಸುಶಾಂತ್ ನಿಧನದ ಒಂದೂವರೆ ತಿಂಗಳ ಬಳಿಕ ಸುಶಾಂತ್ ತಂದೆ ಕೆ.ಕೆ.ಸಿಂಗ್ ಬಿಹಾರದ ಪಾಟ್ನಾದಲ್ಲಿ ನಟಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್  ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್ 

Sushant Singh Rajput

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ತನಿಖೆಯನ್ನ ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇತ್ತ ನಟಿ ರಿಯಾ, ಪಾಟ್ನಾ ಪ್ರಕರಣವನ್ನ ಮುಂಬೈಗೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಿ ಅದೇಶ ನೀಡಿತ್ತು. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

TAGGED:Drugs Casejudicial custodyNCBPublic TVRhea ChakrabortySushant Singh Rajputಎನ್‍ಸಿಬಿಡ್ರಗ್ಸ್ ಕೇಸ್ಪಬ್ಲಿಕ್ ಟಿವಿಬಾಲಿವುಡ್ರಿಯಾ ಚಕ್ರವರ್ತಿಸುಶಾಂತ್ ಸಿಂಗ್ ರಜಪೂತ್
Share This Article
Facebook Whatsapp Whatsapp Telegram

You Might Also Like

Banshankari Police Station
Bengaluru City

ರಾಜಕಾರಣಿಗಳೊಂದಿಗೆ ಮಲಗಲು ಒಪ್ಪದಿದ್ದಕ್ಕೆ 6 ಬಾರಿ ತಲಾಖ್ – ಸೈಕೋ ಪತಿ ವರ್ತನೆಗೆ ಬೇಸತ್ತು ಪತ್ನಿ ದೂರು

Public TV
By Public TV
21 minutes ago
Bengaluru Hosur Toll Hike
Bengaluru City

ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

Public TV
By Public TV
56 minutes ago
Commercial LPG Cylinder 19kg
Latest

ಗುಡ್‌ ನ್ಯೂಸ್‌; ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ

Public TV
By Public TV
59 minutes ago
Abdul Rahim Murder 1
Crime

ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

Public TV
By Public TV
1 hour ago
iqbal hussain
Districts

ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ – ಇಕ್ಬಾಲ್ ಹುಸೇನ್ ಬಾಂಬ್

Public TV
By Public TV
2 hours ago
davanagere mosque
Davanagere

ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?