-ದೆಹಲಿಗೆ ಮಜಾ ಮಾಡಲು ಬಂದಿಲ್ಲ
ನವದೆಹಲಿ : ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ವರಿಷ್ಠರ ಮುಂದೆ ಡಿಸಿಎಂ ಸ್ಥಾನವನ್ನೂ ಕೇಳಿಲ್ಲ. ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೋಳಿ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಅವರನ್ನ ಪರಿಷತ್ ಗೆ ನಾಮನಿರ್ದೇಶನ ಮಾಡಿದ ಹಿನ್ನೆಲೆ ಅವರ ಜೊತೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದೇವೆ. ಬೇರೆ ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ, ಗೆಳೆಯ ಸಿ.ಪಿ ಯೋಗೇಶ್ವರ್ ಅವರಿಗೆ ಈಗ ನ್ಯಾಯ ಸಿಕ್ಕಿದೆ. ಪಕ್ಷ ಅವಕಾಶ ನೀಡಿದ್ದು, ಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ ಬಿಟ್ಟದ್ದು ಅತಿಯಾಸೆ ಮಾಡಬಾರದು ಎಂದರು.
Advertisement
Advertisement
ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿಯ ನಿರ್ವಹಣೆ ಉತ್ತಮವಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಮಹಾರಾಷ್ಟ್ರದಿಂದ ನೀರು ಬರಲು 48 ಗಂಟೆ ಬೇಕು. ಮೇಲಿನಿಂದ ಬರುವಷ್ಟು ನೀರನ್ನು ಕೆಳಗೆ ಬಿಡಲು ಹೇಳಿದ್ದೇವೆ. ಈ ಬಾರಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಸೈಕಲ್ ಮೇಲೆ ಕೊರೊನಾ ಸೋಂಕಿತನ ಶವ ತೆಗೊಂಡೋಗಿದ್ದ ಪ್ರಕರಣ ವಿಚಾರವಾಗಿ ಮಾತನಾಡಿ, ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಇರಬೇಕು ಎಂದು ಸಿಎಂ ಸೂಚಿಸಿದ್ದಾರೆ, ನಾನು ದೆಹಲಿಗೆ ಬಂದು ಪಂಚತಾರಾ ಹೊಟೆಲ್ ನಲ್ಲಿ ಮಜಾ ಮಾಡುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಸೈಕಲ್ ಮೇಲೆ ಶವ ತೆಗೊಂಡೋಗಿದ್ದು ದುರ್ದೈವ ಹೀಗಾಗ ಬಾರದಿತ್ತು. ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿಚಾರವಾಗಿ ನಾನು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದೇನೆ, ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಶಿಫ್ಟ್ ಮಾಡುವುದು ತಪ್ಪು. ಕಾನೂನು ಬದ್ದವಾಗಿ ಸ್ಥಳಾಂತರ ಮಾಡೋಣ ಎಂದು ಮನವಿ ಮಾಡಿದ್ದೇನೆ ಎಂದರು.
ಕೊರೊನಾ ಸಂಕಷ್ಟದ ನಡುವೆ ಸ್ಥಾನಮಾನಕ್ಕೆ ದೆಹಲಿ ದಂಡಯಾತ್ರೆ– ಡಿಸಿಎಂ ಪಟ್ಟಕ್ಕೆ ಜಾರಕಿಹೋಳಿ, ಸಚಿವ ಸ್ಥಾನಕ್ಕೆ ಯೋಗೇಶ್ವರ್ ಲಾಬಿ https://t.co/GftJRkXnks#CoronaVirus #DCM #RameshJarakiholi #Yogeshwar
— PublicTV (@publictvnews) August 17, 2020