– ಅರವಿಂದ್, ದಿವ್ಯಾ ಕಾಲೆಳೆದ ಸುದೀಪ್
ಬಿಗ್‍ಬಾಸ್ ಸೀಸನ್-8ರಲ್ಲಿ ಜೋಡಿಗಳಾಗಿ ಸುದ್ದಿ ಮಾಡುತ್ತಿರುವ ಅರವಿಂದ್ ಮತ್ತು ದಿವ್ಯಾ ಉರುಡುಗ ನೋಡುಗರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಅರವಿಂದ್ ಅವರು ಯಾವ ಕಾರಣಕ್ಕೆ ನಮ್ಮ ಮನೆಯವರಿಗೆ ಇಷ್ಟವಾಗಿದ್ದಾರೆ ಎಂಬ ಕಾರಣವನ್ನು ಇದೀಗ ದಿವ್ಯಾ ಹೇಳಿಕೊಂಡಿದ್ದಾರೆ.
72 ದಿನಗಳ ಪಯಣದ ಬಳಿಕ ಕೊರೊನಾದಿಂದಾಗಿ ಎಲ್ಲರೂ ಕೂಡ ಬಿಗ್‍ಬಾಸ್ ಮನೆಯನ್ನು ಬಿಟ್ಟು ತೆರಳಿದ್ದರು. ಬಳಿಕ ಇದೀಗ ಸೆಕೆಂಡ್ ಇನ್ನಿಂಗ್ಸ್ ಗಾಗಿ ಮತ್ತೆ ಬಂದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್‍ನ ಮೊದಲ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮದಲ್ಲಿ ಸುದೀಪ್ ಅವರು, ಸ್ಪರ್ಧಿಗಳಲ್ಲಿ ನೀವು 72 ದಿನಗಳ ಬಳಿಕ ಮನೆಗೆ ಹೋದಾಗ ನಿಮ್ಮ ಮನೆಗಳಲ್ಲಿ ಇತರ ಸ್ಪರ್ಧಿಗಳ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪ್ರಶ್ನೆ ಹಾಕಿದ್ದಾರೆ. ಈ ವೇಳೆ ದಿವ್ಯಾ ಅವರ ಸರದಿ ಬಂದಾಗ ನಮ್ಮ ಮನೆಯಲ್ಲಿ ಅರವಿಂದ್, ವೈಷ್ಣವಿ, ಶಮಂತ್ ಶುಭಾ ಅವರು ಇಷ್ಟವಾದರು ಎಂದು ದಿವ್ಯಾ ಹೇಳಿಕೊಂಡರು.
ಇದನ್ನು ಕೇಳಿದ ಸುದೀಪ್ ಅವರು ಮುಖವನ್ನು ಕೈಗಳಿಂದ ಮುಚ್ಚಿಕೊಂಡರು ಇದಕ್ಕೆ ನಾಚಿಕೊಂಡ ದಿವ್ಯಾ ಸರ್ ನಾನು ಇರೋದನ್ನು ಹೇಳಿದೆ ಎಂದರು. ಇದಕ್ಕೆ ಸುದೀಪ್, ನಾನು ಏನೇ ಪ್ರಶ್ನೆ ಕೇಳಿದರೂ ಕೂಡ ನೀವು ಆ ಒಂದು ಹೆಸರನ್ನು ಮಾತ್ರ ತೆಗೆದುಕೊಳ್ಳಬಾರದೆಂದು ಅದಕ್ಕೆ ಇತರ ಹೆಸರನ್ನು ಸೇರಿಸಿಕೊಳ್ಳುತ್ತೀರಿ ಎಂದು ಹೇಳಿ ದಿವ್ಯಾ ಅವರ ಕಾಲೆಳೆದರು. ಇದನ್ನೂ ಓದಿ: ಸಿಟ್ಟಿಗೆದ್ದ ಸುದೀಪ್ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್
ದಿವ್ಯಾ ಇಲ್ಲ ಸರ್ ನಾನು ನಿಜ ಹೇಳುತ್ತಿದ್ದೇನೆ ನಮ್ಮ ಮನೆಯಲ್ಲಿ ನನ್ನ ತಮ್ಮನಿಗೆ ಶಮಂತ್ ತುಂಬಾ ಇಷ್ಟ ಆದ ಯಾಕೆಂದರೆ ಅವನು ತಮ್ಮನ ಹುಟ್ಟುಹಬ್ಬಕ್ಕೆ ಸಾಂಗ್ ಹಾಡಿದ್ದ. ವೈಷ್ಣವಿ ಮನೆಯವರಿಗೆಲ್ಲ ಇಷ್ಟ. ಶುಭಾ ಅಕ್ಕ ಕ್ಯೂಟ್, ಕ್ಯೂಟ್ ಆಗಿ ಆಡುದಕ್ಕೆ ಇಷ್ಟ. ಮತ್ತೆ ಅರವಿಂದ ಚೆನ್ನಾಗಿ ಆಟ ಆಡುತ್ತಾರೆ ಎಂದು ಇಷ್ಟ ಎಂದರು. ಸುದೀಪ್ ಅವರು ಇದನ್ನು ಕೇಳಿಸಿಕೊಂಡು ಅರವಿಂದ್ ಚೆನ್ನಾಗಿ ಆಡುತ್ತಾರೆ ಎಂದು ನಿಮ್ಮ ಮನೆಯವರಿಗೆ ಗೊತ್ತಾಯ್ತ ಎಂದು ಈ ಜೋಡಿಯನ್ನು ಕಿಚಾಯಿಸಿದ್ದಾರೆ.