ಬೆಂಗಳೂರು: ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ, ಬಿಗ್‍ಬಾಸ್ ಸೀಸನ್-8ರಲ್ಲಿ ಸ್ಪರ್ಧಿಸುವ ಮೂಲಕ ಫೇಮಸ್ ಆದ ಚಕ್ರವರ್ತಿ ಚಂದ್ರಚೂಡ್‍ರವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪಾತ್ರದಲ್ಲಿ ಅಭಿನಯಿಸಲು ಸಿನಿಮಾ ಒಂದರ ಆಫರ್ ಸಿಕ್ಕಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು, ಇದ್ದ ಅಲ್ಪಾವಧಿಯಲ್ಲಿಯೇ ಚಕ್ರವರ್ತಿ ಚಂದ್ರಚೂಡ್‍ರವರು ಸಖತ್ ಸುದ್ದಿಯಾಗಿಲ್ಲಿದ್ದರು. ಆದರೆ ಕೊರೊನಾದಿಂದ ಅರ್ಧದಲ್ಲಿಯೇ ಬಿಗ್‍ಬಾಸ್ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಸದ್ಯ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಚಕ್ರವರ್ತಿ ಚಂದ್ರಚೂಡ್‍ರವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಪಾತ್ರದಲ್ಲಿ ಅಭಿನಯಿಸಲು ಆಫರ್ ಬಂದಿದ್ಯಂತೆ. ಇದನ್ನು ಓದಿ: ಯೋಗ ಮಾಡಲು ಹೋಗಿ ಟ್ರೋಲ್‍ಗೊಳಗಾದ ನಟಿ ರಾಖಿ ಸಾವಂತ್
ಈ ಕುರಿತಂತೆ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, ಸಾ ರಾ ಮಹೇಶೂ ಡಿಕೆ ರವಿ ಪಿಕ್ಚರ್ ತಗೀತಾರಂತೆ – ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಹೊಸ ಡೈರೆಕ್ಟರ್ ಒಬ್ಬರು ಡಿಕೆ ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಎರಡು ಕಂಡಿಷನ್ ಹಾಕಿದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ? ಇನ್ನೊಂದು bxjwoaabxಹೊಝಖಿಧಟಿ#*%833 (ದುಡ್ಡಲ್ಲ) ನೋಡಣ… ಮುಂದಾ… ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಐಎಎಸ್ ಅಧಿಕಾರಿ ಮತ್ತು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಶ್ರೀ ನಾಲ್ವಡಿ ಕೃಷ್ಣರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಭಾರತ ಸಿಂಧೂರಿ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಬಹಿರಂಗಗೊಂಡಿದೆ.
ಒಟ್ಟಾರೆ ಸಿನಿಮಾದ ಆ ಎರಡು ಕಂಡಿಷನ್‍ನನ್ನು ನಿಗೂಢವಾಗಿಟ್ಟಿದ್ದು, ಸಿನಿಮಾಗೆ ಒಕೆ ಎನ್ನುತ್ತಾರೋ ಇಲ್ಲಾವೋ ಕಾದು ನೋಡಬೇಕಾಗಿದೆ. ಇದನ್ನು ಓದಿ: ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?