Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟ್ರೋಲ್‍ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕರಣ್ ಜೋಹರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಟ್ರೋಲ್‍ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕರಣ್ ಜೋಹರ್

Cinema

ಟ್ರೋಲ್‍ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕರಣ್ ಜೋಹರ್

Public TV
Last updated: July 8, 2020 1:54 pm
Public TV
Share
2 Min Read
karan johar sushanth singh rajput
SHARE

ನವದೆಹಲಿ: ಬಾಲಿವುಡ್‍ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಟ್ರೋಲ್‍ಗೆ ಒಳಗಾಗಿರುವುದು, ಅವರ ವಿರುದ್ಧ ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿದೆ. ಇದಾವುದಕ್ಕೂ ಕರಣ್ ಜೋಹರ್ ತಲೆ ಕೆಡಿಸಿಕೊಂಡವರಲ್ಲ. ಯಾವುದೇ ಟ್ರೋಲ್‍ಗಳಿಗೆ ಕಿವಿಗೊಡದೆ ತಮ್ಮ ಕೆಲಸದ ಕಡೆ ಚಿತ್ತ ಹರಿಸುತ್ತಿದ್ದರು. ಆದರೆ ಇದೀಗ ಅವರು ತುಂಬಾ ನೊಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ.

sushanth 1

ಹೌದು ಇತ್ತೀಚೆಗೆ ಅವರ ವಿರುದ್ಧ ವಿಪರೀತ ದಾಳಿ ನಡೆಯುತ್ತಿದ್ದು, ಇದರಿಂದಾಗಿ ಕರಣ್ ಜೋಹರ್ ಮಾನಸಿಕವಾಗಿ ಕುಗ್ಗಿದ್ದಾರಂತೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ. ಹೀಗೆಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿರುವ ಕುರಿತು ವರದಿಯಾಗಿದೆ. ಕರಣ್ ಜೋಹರ್ ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.

Karan johar

ಈ ಎಲ್ಲ ಬೆಳವಣಿಗೆಗಳಿಂದಾಗಿ ಇತ್ತೀಚೆಗೆ ಅವರು ಕೆಲ ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಅನ್‍ಫಾಲೋ ಮಾಡಿದ್ದರು. ಕೆಲವರನ್ನು ಮಾತ್ರ ಫಾಲೋ ಮಾಡುತ್ತಿದ್ದರು. ಇದಾದ ಬಳಿಕ ಅವರು ಇನ್ನೂ ಕುಗ್ಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಅಲ್ಲದೆ ಈ ವರೆಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.

SUSHANTH SINGH RAJPUT

ಕರಣ್ ಜೋಹರ್ ಅವರು ಮಾತನಾಡಿದ ಮಾತುಗಳು, ಅವರ ವಿಡಿಯೋಗಳು ಇದೀಗ ಮುನ್ನೆಲೆಗೆ ಬರುತ್ತಿದ್ದು, ಸಾಕಷ್ಟು ಟ್ರೋಲ್ ಆಗುತ್ತಿವೆ. ಬಾಲಿವುಡ್‍ನಲ್ಲಿ ಸ್ವಜನ ಪಕ್ಷಪಾತವಿದೆ. ಇದಕ್ಕೆ ಸಾಕ್ಷಿಯೇ ಕೆಲವು ನಿರ್ಮಾಪಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಸ್ಟಾರ್‍ಗಳ ಮಕ್ಕಳಿಗೆ ಬೆಂಬಲ ನೀಡುತ್ತಾರೆ, ಹೊರಗಿನಿಂದ ಬಂದವರನ್ನು ಲೇವಡಿ ಮಾಡುತ್ತಾರೆ, ಉದ್ದೇಶಪೂರ್ವಕವಾಗಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ ಎಂಬ ಆರೋಪ ಕರಣ್ ಜೋಹರ್ ಮೇಲಿದೆ. ಅಲ್ಲದೆ ಸ್ವಜನಪಕ್ಷಪಾತದ ಕೇಂದ್ರ ಬಿಂದು ಕರಣ್ ಜೋಹರ್, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕರಣ್ ಅವರ ಈ ವರ್ತನೆಯೂ ಒಂದು ಕಾರಣ ಎಂದು ಆರೋಪಿಸಲಾಗುತ್ತಿದೆ. ಇದರಿಂದ ಕರಣ್ ತೀವ್ರ ನೊಂದಿದ್ದಾರಂತೆ.

Karan Johar

ಆರೋಗ್ಯವೂ ಹದಗೆಟ್ಟಿದೆ
ಕರಣ್ ಮಾನಸಿಕವಾಗಿ ಘಾಸಿಗೊಂಡಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಿದ್ದು, ಅವರ ಮಾನಸಿಕ ಹಾಗೂ ಆರೋಗ್ಯದ ಸ್ಥಿತಿ ಈಗ ಹದಗೆಟ್ಟಿದೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಈ ಹಿಂದೆ ಅವರನ್ನು ಮಾತ್ರ ಟ್ರೋಲ್ ಮಾಡಲಾಗುತ್ತಿತ್ತು. ಈಗ ಅವರಿಗೆ ಆಪ್ತರಾಗಿರುವವರ ವಿರುದ್ಧವೂ ದಾಳಿ ನಡೆಯುತ್ತಿದೆ. ಅವರ ಮೂವರು ಮಕ್ಕಳಿಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಅಲ್ಲದೆ ಸುಶಾಂತ್ ಘಟನೆಗೆ ಸಂಬಂಧವೇ ಇಲ್ಲದ ಅನನ್ಯಾ ಪಾಂಡೆಯಂತಹ ನಟಿಯರನ್ನು ಟೀಕಿಸಲಾಗುತ್ತಿದೆ. ಸುಶಾಂತ್ ಸಾವಿಗೆ ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಆಕೆಗೆ ಬೆದರಿಸಲಾಗುತ್ತಿದೆಯಂತೆ.

sushanth

ಬಾಲಿವುಡ್‍ನಲ್ಲಿ ಯಾರೂ ಬೆಂಬಲ ನೀಡುತ್ತಿಲ್ಲ
ಕರಣ್ ಜೋಹರ್ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರು ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಫೋನ್‍ನಲ್ಲಿ ನನ್ನ ಜೊತೆ ಮಾತನಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಾರೆ. ಈ ರೀತಿ ಆಗಲು ನಾನು ಮಾಡಿರುವ ತಪ್ಪಾದರೂ ಏನೆಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಬಾಲಿವುಡ್‍ನಲ್ಲಿ ಯಾರೂ ಅವರ ಬೆಂಬಲಕ್ಕೆ ಬರುತ್ತಿಲ್ಲ ಎಂಬ ಬೇಸರ ಸಹ ಅವರಲ್ಲಿ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಇತ್ತೀಚೆಗೆ ಮುಂಬೈ ಚಿತ್ರೋತ್ಸವದ ಮಂಡಳಿಗೂ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

TAGGED:bollywoodKaran JoharPublic TVSushant Singh Rajputಕರಣ್ ಜೋಹರ್ಪಬ್ಲಿಕ್ ಟಿವಿಬಾಲಿವುಡ್ಸುಶಾಂತ್ ಸಿಂಗ್ ರಜಪೂತ್
Share This Article
Facebook Whatsapp Whatsapp Telegram

Cinema news

Nagachaitanya Shobitha Wedding
ಸಮಂತಾಗೂ ಮುನ್ನ ಗುಡ್‌ನ್ಯೂಸ್ ಕೊಡಲು ಸಜ್ಜಾದ್ರಾ ಮಾಜಿ ಪತಿ?
Cinema Latest South cinema Top Stories
Nora Fatehis Special Song in Jailer 2
ತಲೈವ ಜೊತೆ ಸೊಂಟ ಬಳುಕಿಸೋಕೆ ನೋರಾ ಫತೇಹಿ ರೆಡಿ
Latest South cinema Top Stories
KGF Co Director Kirtan Nadagouda
KGF ಸಹ-ನಿರ್ದೇಶಕ ಕೀರ್ತನ್ ನಾಡಗೌಡರ 4 ವರ್ಷದ ಮಗು ಲಿಫ್ಟ್‌ ಅಪಘಾತದಲ್ಲಿ ಸಾವು
Cinema Latest Sandalwood Top Stories
ravichandran bigg boss
ಬಿಗ್‌ ಬಾಸ್‌ ಮನೆಗೆ ಕ್ರೇಜಿಸ್ಟಾರ್‌ ಎಂಟ್ರಿ – ತನ್ನ ಹೃದಯ ಕದ್ದ ಚೆಲುವೆ ಬಗ್ಗೆ ಮಾತಾಡಿದ ರವಿಚಂದ್ರನ್‌
Cinema Latest Top Stories TV Shows

You Might Also Like

CRIME
Crime

ಶಿರಾ | 3 ಕೋಟಿಯ ಜಾಗಕ್ಕಾಗಿ ಹರಿಯಿತು ನೆತ್ತರು – ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವಕನ ಹತ್ಯೆ

Public TV
By Public TV
20 minutes ago
Mysuru Supari Case
Crime

ಹೆಂಡ್ತಿ ಮರ್ಯಾದೆ ಕೊಡ್ತಿಲ್ಲ ಅಂತ ಹತ್ಯೆಗೆ 5 ಲಕ್ಷ ಸುಪಾರಿ ಕೊಟ್ಟ ಪತಿ!

Public TV
By Public TV
29 minutes ago
Karwar Port
Districts

ಕಾರವಾರ | ಕರಾವಳಿ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ್‌ – 2 ದಿನ ತೀವ್ರ ಚಳಿ ಎಚ್ಚರಿಕೆ

Public TV
By Public TV
44 minutes ago
daily horoscope dina bhavishya
Astrology

ದಿನ ಭವಿಷ್ಯ: 19-12-2025

Public TV
By Public TV
1 hour ago
airport
Bengaluru City

ಬೆಂಗಳೂರಿನಲ್ಲಿ 2ನೇ ಏರ್‌ಪೋರ್ಟ್‌| ಅಧ್ಯಯನ ನಡೆದಿದೆ, ರಾಜ್ಯ ಸರ್ಕಾರದಿಂದ ಪ್ರಸ್ತಾಪ ಬಂದಿಲ್ಲ: ಕೇಂದ್ರ

Public TV
By Public TV
9 hours ago
01 11
Big Bulletin

ಬಿಗ್‌ ಬುಲೆಟಿನ್‌ 18 December 2025 ಭಾಗ-1

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?