ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ್ದು, ಅಣ್ಣ-ತಮ್ಮನ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಾದರೆ ಕೆಪಿಸಿಸಿ ಸರದಾರನ ಮನೆಯ ಮೇಲೆ ಸಿಬಿಐ ದಾಳಿಗೆ ಸಿಬಿಐ ಕೊಟ್ಟ ಕಾರಣವೇನು, ಟ್ರಬಲ್ ಶೂಟರ್ ಲಾಕ್ ಆಗಿದ್ದು ಹೇಗೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಅಕ್ರಮ ಆಸ್ತಿ ಗಳಿಕೆ ಹಾಗೂ ಸಾರ್ವಜನಿಕ ಹಣದ ದುರುಪಯೋಗ ಈ ಎರಡು ಕಾರಣಗಳೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಲು ಪ್ರಮುಖ ಕಾರಣವಾಗಿದೆ. ಮೊದಲು ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಐಟಿಯ ಎರಡು ದಾಖಲೆಗಳನ್ನು ಸಿಬಿಐ ಕೂಲಂಕುಷವಾಗಿ ಪರಿಶೀಲನೆ ನಡೆಸಿದೆ.
ಮನಿ ಲಾಂಡ್ರಿಂಗ್ ತೆರಿಗೆ ವಂಚನೆ ಸಿಬಿಐ ತನಿಖೆಯ ವ್ಯಾಪ್ತಿಗೆ ಬರಲ್ಲ. ಹೀಗಾಗಿ ಸಿಬಿಐಗೆ ಈ ಹಿಂದಿನ ಎರಡು ಮಂತ್ರಿ ಪಟ್ಟ ಟಾರ್ಗೆಟ್ ಆಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಪವರ್ ಮಿನಿಸ್ಟರ್ ಹುದ್ದೆಯಲ್ಲಿರುವಾಗ ಡಿಕೆ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿ ವ ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಬಂದಿತ್ತು. ಇದನ್ನೂ ಓದಿ: ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ
ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಇಡಿ ಹಾಗೂ ಐಟಿ ಲೆಕ್ಕ ಹಾಕಿದೆ. ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪ ಇದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ. ಅದರ ಆಧಾರದ ಮೇಲೆ ಇಂದು ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿ: ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?
ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಅಕ್ರಮವಾಗಿ ಭೂ ವ್ಯವಹಾರದ ಆರೋಪವೂ ಕೇಳಿಬಂದಿತ್ತು. ಈ ಕುರಿತು ದಾಖಲಾದ ಪ್ರಕರಣಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೇಳಲಾಗಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ವಿಚಾರಣೆ ನಡೆಸಿತ್ತು. ಹಲವು ಬಾರಿ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಆ ಪ್ರಕರಣದಲ್ಲಿ ಡಿಕೆಶಿ ತಿಹಾರ್ ಜೈಲಿಗೂ ಹೋಗಿಬಂದಿದ್ದರು. ಇದನ್ನೂ ಓದಿ: ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ