Connect with us

Bengaluru City

ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

Published

on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ಟ್ರಬಲ್ ಶೂಟರ್ ಗೆ ಶಾಕ್ ನೀಡಿದ್ದಾರೆ. ಉಪ ಚುನಾವಣೆ ಹೊಸ್ತಿಲದಲ್ಲಿರುವ ಸಮಯದಲ್ಲಿ ಸಿಬಿಐ ದಾಳಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೈ ಮುಖಂಡರು ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಶಿರಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಡಿ.ಕೆ.ಶಿವಕುಮಾರ್ ಇಂದು ಆರ್.ಆರ್.ನಗರದಲ್ಲಿ ಸ್ಪರ್ಧಿಸುವ ಸ್ಪರ್ಧಿಯ ಹೆಸರು ಘೋಷಣೆ ಮಾಡುವದಲ್ಲಿದ್ದರು. ಇಂದು ಅಥವಾ ನಾಳೆ ಅಭ್ಯರ್ಥಿಉ ಹೆಸರು ಘೋಷಣೆ ಮಾಡಿ, ಉಪ ಚುನಾವಣೆ ಅಖಾಡಕ್ಕೆ ಇಳಿಯಲಿದ್ದರು. ಚುನಾವಣೆ ಜೋಶ್ ನಲ್ಲಿದ್ದ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಉರುಳಿನಿಂದ ಬಚಾವ್ ಆಗಬೇಕಿದೆ.

ಬೆಳ್ಳಂಬೆಳಗ್ಗೆ ಡಿಕೆಶಿಗೆ ಶಾಕ್- ಮನೆ ಮೇಲೆ ಸಿಬಿಐ ದಾಳಿ

ಬೆಳ್ಳಂಬೆಳಗ್ಗೆ ಡಿಕೆಶಿಗೆ ಶಾಕ್- ಮನೆ ಮೇಲೆ ಸಿಬಿಐ ದಾಳಿ#DKShivakumar #CBI #Karnataka #Congress #KPCC #KannadaNews

Gepostet von Public TV am Sonntag, 4. Oktober 2020

ತನ್ನದೇ ಕ್ಷೇತ್ರವಾಗಿರುವ ಆರ್.ಆರ್.ನಗರ ಉಳಿಸಿಕೊಳ್ಳಲು ಡಿಕೆ ಬ್ರದರ್ಸ್ ಚುನಾವಣೆ ರಣತಂತ್ರ ರೂಪಿಸಿದ್ದರು. ಇತ್ತ ಜೆಡಿಎಸ್ ತೆಕ್ಕೆಯಲ್ಲಿರುವ ಶಿರಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ರುಚಿ ತೋರಿಸಲು ಕೆಪಿಸಿಸಿ ಸಾರಥಿಯಾಗಿರುವ ಡಿ.ಕೆ. ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದರು.

ಸೋಲಾರ್ ವ್ಯವಹಾರವೇ ಡಿಕೆಗೆ ಕುತ್ತು?

15 ಕಡೆ 60 ಸಿಬಿಐ ಅಧಿಕಾರಿಗಳ ದಾಳಿ#DKShivakumar #CBI #Karnataka #Congress #KPCC #KannadaNews #DKSuresh #KarnatakaPolitics #CBIRaid #Karnataka

Gepostet von Public TV am Sonntag, 4. Oktober 2020

Click to comment

Leave a Reply

Your email address will not be published. Required fields are marked *