ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನ ಈಜು ಸ್ಪರ್ಧೆಯಲ್ಲಿ 5 ಚಿನ್ನದ ಪದಕ ಗೆಲ್ಲುವ ಮೂಲಕ ಅಮೆರಿಕದ ಕೇಲೆಬ್ ಡ್ರೆಸೆಲ್ ಚಿನ್ನದ ಮೀನಾಗಿದ್ದಾರೆ.
Advertisement
ಈ ಹಿಂದೆ ಅಮೆರಿಕಾದವರೇ ಆದ ಮೈಕಲ್ ಫೆಲ್ಫ್ಸ್ ಈಜು ಸ್ಪರ್ಧೆಯ ಚಿನ್ನದ ಮೀನಾಗಿದ್ದರು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವರು ಸ್ಪರ್ಧಿಸುತ್ತಿಲ್ಲ. ಆದರೆ ಅವರದೇ ದೇಶದ ಡ್ರೆಸೆಲ್ ಸ್ವಿಮ್ಮಿಂಗ್‍ನಲ್ಲಿ 5 ಚಿನ್ನವನ್ನು ಗೆಲ್ಲುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ
Advertisement
Advertisement
ಡ್ರೆಸೆಲ್ ಜುಲೈ 26ರಂದು 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಮೊದಲ ಚಿನ್ನ ಪಡೆದರೆ, ಜುಲೈ 29ರಂದು 100 ಮೀ. ಫ್ರೀಸ್ಟೈಲ್‍ನಲ್ಲಿ ಎರಡನೇ ಚಿನ್ನ, ಜುಲೈ 31ರಂದು 100 ಮೀ. ಬಟರ್‍ಫ್ಲೈನಲ್ಲಿ ಮೂರನೇ ಚಿನ್ನ, ಆಗಸ್ಟ್ 1ರಂದು ನಡೆದ 50 ಮೀ. ಫ್ರೀಸ್ಟೈಲ್ ನಾಲ್ಕು ಮತ್ತು 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ 5ನೇ ಚಿನ್ನದ ಪದಕ ಗೆದ್ದು ಚಿನ್ನದ ಮೀನಾಗಿ ಮಿನುಗಿದ್ದಾರೆ.
Advertisement
ಈ ಹಿಂದೆ 2008ರಲ್ಲಿ ಮೈಕೆಲ್ ಫೆಲ್ಫ್ಸ್ 8 ಚಿನ್ನ, 2004ರಲ್ಲಿ 6 ಚಿನ್ನ, 2016ರಲ್ಲಿ 5 ಚಿನ್ನ ಗೆದ್ದಿದ್ದರು. 1972ರಲ್ಲಿ ಆಂಡ್ರೋ ಸ್ಪಿಟ್ಜ್ 7 ಚಿನ್ನ, 1988ರಲ್ಲಿ ಕ್ರಿಸ್ಟಿನ್ ಒಟ್ಟೋ 6 ಚಿನ್ನ, 1988ರಲ್ಲಿ ಮ್ಯಾಥ್ಯೂ ನಿಕೋಲಸ್ ಬಿಯಾಂಡಿ 5 ಚಿನ್ನ ಗೆದ್ದಿದ್ದರು. ಇದೀಗ ಡ್ರೆಸೆಲ್ 5 ಚಿನ್ನ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್ನಲ್ಲಿ 5 ಚಿನ್ನ ಗೆದ್ದ ಐದನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.