ಬೆಂಗಳೂರು: 2021ರ ವರ್ಷಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಫಾರ್ಚ್ಯೂನರ್ ಎಸ್‍ಯುವಿಯನ್ನು ಎರಡು ಹೊಸ ಅವತಾರಗಳಲ್ಲಿ ಬಿಡುಗಡೆ ಮಾಡಿದೆ. ನ್ಯೂ ಫಾರ್ಚ್ಯೂನರ್ ಮತ್ತು ಫಾರ್ಚ್ಯೂನರ್ ಲೆಜೆಂಡರ್ ಹೆಸರಿನ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ.
ನ್ಯೂ ಫಾರ್ಚ್ಯೂನರ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಅವತರಣಿಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನ ಬೆಲೆ ರೂ. 29.98 ಲಕ್ಷದಿಂದ ಆರಂಭವಾಗುತ್ತವೆ. ಡೀಸೆಲ್ ಎಂಜಿನ್ ಕಾರಿನ ಬೆಲೆ ರೂ. 32.48 ಲಕ್ಷದಿಂದ ಆರಂಭವಾಗುತ್ತವೆ.
Advertisement
Advertisement
ನ್ಯೂ ಫಾರ್ಚ್ಯೂನರ್ ಕಾರಿನ ಪೆಟ್ರೋಲ್ ಎಂಜಿನ್ ಸಾಮರ್ಥ್ಯ 2.7 ಲೀಟರ್ ಇದ್ದು, 166 ಹೆಚ್‍ಪಿ ಶಕ್ತಿ ಮತ್ತು 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನ್ಯುಯಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನೊಂದಿಗೆ ದೊರೆಯಲಿದೆ.
Advertisement
2.8 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನ್ಯುಯಲ್ ಟ್ರ್ಯಾನ್ಸ್‍ಮಿಷನ್‍ನಲ್ಲಿ 204 ಹೆಚ್‍ಪಿ ಶಕ್ತಿ ಮತ್ತು 420 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 6-ಸ್ಪೀಡ್ ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನಲ್ಲಿ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
Advertisement
ಫಾರ್ಚ್ಯೂನರ್ ಪೆಟ್ರೋಲ್ ಮಾದರಿ ಕೇವಲ 2 ವೀಲ್ ಡ್ರೈವ್ ರೂಪದಲ್ಲಿ ಮಾತ್ರ ದೊರೆಯಲಿದ್ದು, ಡೀಸೆಲ್ ಮಾದರಿಯಲ್ಲಿ 4 ವೀಲ್ ಡ್ರೈವ್ ವ್ಯವಸ್ಥೆ ಇದೆ. ಫಾರ್ಚ್ಯೂನರ್ ಲೆಜೆಂಡರ್ ಕೇವಲ 2 ವೀಲ್ ಡ್ರೈವ್ ವ್ಯವಸ್ಥೆ ಹೊಂದಿದ್ದು, ಆಟೋಮ್ಯಾಟಿಕ್ ಟ್ರ್ಯಾನ್ಸ್‌ಮಿಷನ್‌ನಲ್ಲಿ ಮಾತ್ರ ದೊರೆಯುತ್ತದೆ.
ನ್ಯೂ ಟೊಯೋಟಾ ಫಾರ್ಚೂನರ್ ಕಾರು ಮರುವಿನ್ಯಾಸಗೊಳಿಸಲಾದ ಎಲ್‍ಇಡಿ ಹೆಡ್‍ಲೈಟ್‍ಗಳು, ಎಲ್‍ಇಡಿ ಡೇ ಟೈಮ್ ರನ್ನಿಂಗ್ ಲೈಟ್‍ಗಳು, ದೊಡ್ಡ ಮೆಶ್-ಪ್ಯಾಟರ್ನ್ ಗ್ರಿಲ್, ಮರುವಿನ್ಯಾಸಗೊಳಿಸಿದ ಫ್ರಂಟ್ ಬಂಪರ್ ಮತ್ತು ಹೊಸ 18 ಇಂಚಿನ ಅಲಾಯ್ ವೀಲ್‍ಗಳನ್ನು ಒಳಗೊಂಡಿದೆ.
ಆಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯ ಹೊಂದಿರುವ 8.0-ಇಂಚಿನ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್ ಸಿಸ್ಟಮ್, ನವೀಕರಿಸಿದ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, 8-ವೇ ಪವರ್-ಅಡ್ಜಸ್ಟೆಬಲ್ ವೆಂಟಿಲೇಟೆಡ್ ಸೀಟುಗಳು, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ರ್‌ಗಳನ್ನು ನ್ಯೂ ಫಾರ್ಚ್ಯೂನರ್ ಕಾರು ಹೊಂದಿದೆ.
Introducing the new Legender and Fortuner with incredible power and amazing styling.
For more, visit https://t.co/G0IMx2Nr7j#PoweredInStyle #LeadWithPower #PowerPackedLeader #PowerUnleashed #NewFortuner #ToyotaLegender #Toyota #ToyotaIndia pic.twitter.com/99GfnSPkNb
— Toyota India (@Toyota_India) January 6, 2021
‘ಲೆಜೆಂಡರ್’ ಆವೃತ್ತಿ ಸ್ಪೋರ್ಟಿಯರ್ ವ್ಯಕ್ತಿತ್ವವನ್ನು ಹೊಂದಿದೆ. ಸ್ಪ್ಲಿಟ್ ಗ್ರಿಲ್, ಸೀಕ್ವೆನ್ಷಿಯಲ್ ಎಲ್‍ಇಡಿ ಟರ್ನ್ ಇಂಡಿಕೇಟರ್‌ಗಳು ಹೊಂದಿರುವ ವಿಭಿನ್ನ ಮುಂಭಾಗದ ಬಂಪರ್, ಎಲ್‍ಇಡಿ ಡಿಆರ್‍ಎಲ್‍ಗಳಿಗಾಗಿ ವಿಶಿಷ್ಟ ಮಾದರಿಯನ್ನು ಹೊಂದಿರುವ ಎಲ್‍ಇಡಿ ಪ್ರೊಜೆಕ್ಟರ್‌ಗಳು ಹೆಡ್‍ಲೈಟ್‍ಗಳು ಮತ್ತು ಗ್ಲೋಸ್ ಬ್ಲ್ಯಾಕ್ ಫಿನಿಶ್ ಅಲಾಯ್ ವೀಲ್‍ಗಳನ್ನು ಹೊಂದಿದೆ. ಫಾರ್ಚೂನರ್ ಲೆಜೆಂಡರ್ ಕಾರು ಕೇವಲ ಪರ್ಲ್ ವೈಟ್ ಬಣ್ಣದಲ್ಲಿ ಲಭ್ಯವಿದೆ. ಲೆಜೆಂಡರ್ ಹ್ಯಾಂಡ್ಸ್-ಫ್ರೀ ಟೈಲ್ ಗೇಟ್ ಓಪನ್ ಫಂಕ್ಷನ್ ಕೂಡ ಹೊಂದಿದೆ.
The new Legender and Fortuner has everything you want. Power-packed engine, connectivity features, plush seating and 8.0 touchscreen audio are just some of them.
Visit: https://t.co/G0IMx2Nr7j #PoweredInStyle #PowerToLead #NewFortuner #FortunerLegender #Toyota #ToyotaIndia pic.twitter.com/gwOLxYH2tB
— Toyota India (@Toyota_India) January 7, 2021