– ಬೇಬಿ ಡಾಲ್ ವಿಡಿಯೋ ವೈರಲ್
ಲಾಸ್ ಎಂಜಲೀಸ್: ಮಾದಕ ಚೆಲುವೆ ಸನ್ನಿ ಲಿಯೋನ್ ಲಾಕ್‍ಡೌನ್ ದಿನಗಳಲ್ಲಿ ವಿವಿಧ ರೀತಿಯ ವಿಡಿಯೋ ಮಾಡುವ ಮೂಲಕ ಮನರಂಜನೆ ಜೊತೆಗೆ ಹಲವು ವಿಚಾರಗಳನ್ನು ತಿಳಿಸಿದ್ದರು. ಇದೀಗ ಅವರು ಯೋಗ ಹಾಗೂ ಬಾಕ್ಸಿಂಗ್ ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದು, ಬಾಕ್ಸಿಂಗ್ ಮಾಡಿ ದಣಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್‍ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಬೇಬಿ ಡಾಲ್, ಲಾಕ್‍ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುತ್ತಲೇ ವಿವಿಧ ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ಮಗಳು ನಿಶಾ ಜೊತೆಗೆ ಪೇಂಟಿಂಗ್ ಸೆಷನ್ ನಡೆಸಿ ಎಂಜಾಯ್ ಮಾಡುತ್ತಿದ್ದರು. ಈಗ ಫಿಟ್ನೆಸ್, ಯೋಗ ಹಾಗೂ ಬಾಕ್ಸಿಂಗ್‍ನತ್ತ ಒಲವು ತೋರಿದ್ದು, ಕೆಲ ದಿನಗಳಿಂದ ಬಾಕ್ಸಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾರೆ.
View this post on Instagram
ಮೂರು ಮಕ್ಕಳ ತಾಯಿಯಾಗಿರುವ ಸನ್ನಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ಬಾಕ್ಸಿಂಗ್ ಸೆಷನ್‍ನ ಎರಡನೇ ದಿನದ ಅನುಭವವನ್ನು ಹಂಚಿಕೊಂಡಿದ್ದಾರೆ. ಹೇ ಗಾಯ್ಸ್, ಎರಡನೇ ದಿನದ ಬಾಕ್ಸಿಂಗ್ ಮುಗಿಯಿತು ಎಂದು ಹೇಳಿದ್ದಾರೆ. ಅಲ್ಲದೆ ಬಾಕ್ಸಿಂಗ್‍ನಿಂದ ಮುಖ ಹೇಗೆ ಕೆಂಪಾಗಿದೆ ಎಂದು ಸಹ ತೋರಿಸಿದ್ದಾರೆ.
View this post on Instagram
ಮೊದಲ ದಿನ ಬಾಕ್ಸಿಂಗ್‍ಗೆ ತೆರಳಿದ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದು, ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಮೊದಲ ದಿನದ ಬಾಕ್ಸಿಂಗ್ ಬಿಫೋರ್ ಆ್ಯಂಡ್ ಆಫ್ಟರ್. ಟೊಮೆಟೊ ರೀತಿ ನನ್ನ ಮುಖ ಕೆಂಪಾಗಿದೆ. ಈ ಚಿತ್ರಹಿಂಸೆ ಬಳಿಕವೂ ಮತ್ತೆ ಅದನ್ನೇ ಮಾಡಲು ಬಯಸಿದ್ದೇನೆ ಎಂದು ಹೇಳಿದ್ದರು. ನಿತ್ಯ ವರ್ಕೌಟ್ ಮಾಡುವ ಹಲವು ಚಿತ್ರಗಳನ್ನು ಸನ್ನಿ ಹಂಚಿಕೊಳ್ಳುತ್ತಿದ್ದಾರೆ.
ಸನ್ನಿ ಲಿಯೋನ್ ಸದ್ಯ ತಮಿಳಿನ ವೀರಮಾದೇವಿ, ಮಲಯಾಳಂನ ರಂಗೀಲಾ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದದೆ. ಇದೀಗ ಲಾಸ್ ಎಂಜಲೀಸ್‍ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.