ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕೆಲವು ನಿಯಮಗನ್ನು ಪಾಲಿಸಲೇಬೇಕು. ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರ ತಿಳಿದಿದೆ. ಹೀಗಿರುವಾಗ ಟೊಮೆಟೊವನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಹಲವು ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ.
ಟೊಮೆಟೊ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ರಂಜಕವನ್ನು ಹೊಂದಿದೆ. ಸಾಧ್ಯವಾದಷ್ಟು ನಿಯಮಿತ ಪ್ರಮಾಣದಲ್ಲಿ ಆಗಾಗ ಟೊಮೆಟೊ ಹಣ್ಣುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬೇಕಾಗುವ ಹಲವು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನೂ ಓದಿ: ನೀವು ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ
* ಹಣ್ಣಾದ ಟೊಮೆಟೊವನ್ನು ಮುಖದ ಸೌಂದರ್ಯ ಹೆಚ್ಚಿಸಲು ಬಳಸಬಹುದು. ಟೊಮೆಟೊದಲ್ಲಿನ ಲೈಕೋಪೀನ್ ಮುಖದ ಕಾಂತಿ ಹೆಚ್ಚಿಸುತ್ತದೆ.
* ಟೊಮೆಟೊ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕೂದಲಿನ ಆರೋಗ್ಯವನ್ನು ಕಾಪಡುತ್ತದೆ.
* ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಕಡಿಮೆ ಮಾಡುವ ಗುಣ ಇದೆ.
* ಟೊಮೆಟೊದಲ್ಲಿ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.
* ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿಕೊಳ್ಳುವುದು ಸೂಕ್ತ. ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
* ನಿಮ್ಮ ಹೃದಯವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಟೊಮೆಟೊ ಹಣ್ಣುಗಳಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮಾರಕ ಕ್ಯಾನ್ಸರ್ ಸಮಸ್ಯೆಯಿಂದ ನಿಮ್ಮನ್ನು ದೂರ ಇಡುವಂತಹ ಸಾಧ್ಯತೆ ಕೂಡ ಇದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಟೊಮೆಟೊ ಹಣ್ಣುಗಳನ್ನು ಬಳಕೆ ಮಾಡಲು ಹಿಂಜರಿಕೆ ಬೇಡ.