ಲಂಡನ್: ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ವಿಶೇಷ ಬದಲಾವಣೆಯೊಂದನ್ನು ತರಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಚಿಂತನೆ ನಡೆಸಿದೆ. ಇದುವರೆಗೂ ಪಂದ್ಯದ ಸಮಯದಲ್ಲಿ ಆಟಗಾರ ಗಾಯಗೊಂಡರೆ ಕನ್ಕೂಷನ್ ಸಬ್‍ಸ್ಟಿಟ್ಯೂಟ್ ಪ್ಲೇಯರ್ ಅಥವಾ ಸಬ್‍ಸ್ಟಿಟ್ಯೂಟ್ ಫಿಲ್ಡರನ್ನು ತೆಗೆದುಕೊಳ್ಳಲು ಐಸಿಸಿ ನಿಯಮಗಳ ಅಡಿ ಅವಕಾಶ ನೀಡಲಾಗಿದೆ. ಆದರೆ ಈಗ ಕೊರೊನಾ ವೈರಸ್ ರಿಪ್ಲೇಸ್ಮೆಂಟ್ (ಸಬ್‍ಸ್ಟಿಟ್ಯೂಟ್)ಗೆ ಅವಕಾಶ ನೀಡಬೇಕು ಎಂದು ಐಸಿಸಿಗೆ ಇಸಿಬಿ ಮನವಿ ಮಾಡಿದೆ. ಅಲ್ಲದೇ ತಮ್ಮ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿದೆ ಎಂಬ ವಿಶ್ವಾಸವನ್ನು ಇಸಿಬಿ ವ್ಯಕ್ತಪಡಿಸಿದೆ.
Advertisement
ಕೋವಿಡ್-19 ಸಬ್‍ಸ್ಟಿಟ್ಯೂಟ್ ಕುರಿತ ಅಂಶಗಳ ಬಗ್ಗೆ ಐಸಿಸಿ ಇನ್ನು ಕೆಲ ಅಂಶಗಳನ್ನು ಪರಿಗಣೆಗೆ ತೆಗೆದುಕೊಳ್ಳಬೇಕಿದೆ. ಅಲ್ಲದೇ ನಮ್ಮ ಮನವಿಗೆ ಅಂಗೀಕಾರ ನೀಡುವ ಅಗತ್ಯವಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಟೂರ್ನಿಗೂ ಮುನ್ನವೇ ಈ ಮನವಿಯನ್ನು ಜಾರಿ ಮಾಡುವ ಪ್ರಯತ್ನ ಸಾಗುತ್ತದೆ ಎಂದು ಇಸಿಬಿ ಈವೆಂಟ್ ಡೈರೆಕ್ಟರ್ ಸ್ಟೀವ್ ಎಲ್ವರ್ತಿ ತಿಳಿಸಿದ್ದಾರೆ. ಅಲ್ಲದೇ ಏಕದಿನ ಮತ್ತು ಟಿ20 ಕ್ರಿಕೆಟ್‍ನಿಂದ ಈ ಬದಲಾವಣೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಕೊರೊನಾ ಕಾರಣದಿಂದ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ ನಿಂದ ಇಸಿಬಿ ಪ್ರಾರಂಭಿಸಲಿದೆ. ಬಯೋ ಸೆಕ್ಯೂಲರ್ ವಾತಾವರಣದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧದ ಟೂರ್ನಿಗಳನ್ನು ಆಯೋಜಿಸುವುದಾಗಿ ಇಸಿಬಿ ಈ ಹಿಂದೆಯೇ ತಿಳಿಸಿತ್ತು. ಇಂಗ್ಲೆಂಡ್ ಸರ್ಕಾರ ಅನುಮತಿ ಮತ್ತು ಮಾರ್ಗದರ್ಶಗಳ ಅನ್ವಯ ಟೂರ್ನಿಯನ್ನು ಏರ್ಪಡಿಸುವುದಾಗಿ ಇಸಿಬಿ ಸ್ಪಷ್ಟಪಡಿಸಿದೆ. ಜೂನ್ ಮೊದಲ ವಾರದವರೆಗೂ ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ಇಂಗ್ಲೆಂಡ್ ಸರ್ಕಾರ ನಿಷೇಧ ಮಾಡಿದೆ. ಜುಲೈ 1 ರಿಂದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ಇದನ್ನು ಓದಿ: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಲೋಚನೆ ಅವಾಸ್ತವಿಕ: ರಾಹುಲ್ ದ್ರಾವಿಡ್
Advertisement
ಐಸಿಸಿ ನಿಯಮಗಳ ಅನ್ವಯ ಟೆಸ್ಟ್ ಪಂದ್ಯವೊಂದರ ಸಮಯದಲ್ಲಿ ಆಟಗಾರ ಗಾಯಗೊಂಡ ಸಂದರ್ಭದಲ್ಲಿ ಆತನ ಬದಲಿಗೆ ಮತ್ತೊಬ್ಬ ಆಟಗಾರರನ್ನು (ಕನೂಷ್ಕನ್ ಸಬ್‍ಸ್ಟಿಟ್ಯೂಟ್) ಆಡಿಸಬಹುದು. ಬದಲಿ ಆಟಗಾರ ಬ್ಯಾಟ್ ಅಥವಾ ಬೌಲ್ ಮಾಡಬಹುದು. ಆದರೆ ಎರಡೂ ಮಾಡಲು ಸಾಧ್ಯವಿಲ್ಲ. ಉಳಿದಂತೆ ಸಬ್‍ಸ್ಟಿಟ್ಯೂಟ್ ಫಿಲ್ಡರನ್ನು ತೆಗೆದುಕೊಳ್ಳಲು ಅವಕಾಶವಿದೆ.