ಇಸ್ಲಾಮಾಬಾದ್: ಚೀನಿ ಆ್ಯಪ್ ಟಿಕ್‍ಟಾಕ್ ಮೇಲೆ ವಿಧಿಸಲಾಗಿದ್ದ ನಿಷೇಧವನ್ನ ಪಾಕಿಸ್ತಾನ ತೆರವುಗೊಳಿಸಿ ಸ್ಪಷ್ಟನೆ ನೀಡಿದೆ.
ಟಿಕ್‍ಟಾಕ್ ಸ್ಥಳೀಯ ನಿಯಮಗಳನ್ನು ಪಾಲಿಸೋದಾಗಿ ಒಪ್ಪಿಕೊಂಡಿದೆ. ಜೊತೆಗೆ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಲು ಸಮ್ಮತಿಸಿದೆ. ಇನ್ಮುಂದೆ ಪಾಕಿಸ್ತಾನದಲ್ಲಿ ಲಭ್ಯವಿರುವ ಟಿಕ್‍ಟಾಕ್ ನಲ್ಲಿ ಅಶ್ಲೀಲ ಮತ್ತು ಕಾನೂನುಬಾಹಿರ ದೃಶ್ಯಗಳು ಪ್ರಸಾರವಾಗಲ್ಲ ಎಂದು ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಅಥಾರಿಟಿ (ಪಿಟಿಎ) ವಕ್ತಾರ ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ 2 ಕೋಟಿಗೂ ಅಧಿಕ ಜನರು ಟಿಕ್‍ಟಾಕ್ ಬಳಕೆ ಮಾಡುತ್ತಾರೆ. ಕಳೆದ ಒಂದು ವರ್ಷದಲ್ಲಿ ವಾಟ್ಸಪ್ ಮತ್ತು ಫೇಸ್‍ಬುಕ್ ನಂತರ ಅತಿ ಹೆಚ್ಚು ನೆಟ್ಟಿಗರು ಟಿಕ್‍ಟಾಕ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಟಿಕ್‍ಟಾಕ್ ಹೊಂದಿದೆ. ಇದನ್ನೂ ಓದಿ: ಮಿಟ್ರಾನ್ ಆ್ಯಪ್ ಭಾರತದ್ದೋ? ಪಾಕಿಸ್ತಾನದ್ದೋ – ಇಲ್ಲಿದೆ ಉತ್ತರ
ಟಿಕ್ ಟಾಕ್ ನಿಷೇಧಿಸಿದ ಬಳಿಕ ಮಾಹಿತಿ ನೀಡಿದ್ದ ಪಿಟಿಎ, ಕಾನೂನು ಬಾಹಿರ, ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳ ಕುರಿತು ಅಸಂಖ್ಯ ದೂರುಗಳು ಬಂದಿವೆ. ಹಲವು ಬಾರಿ ಈ ಕುರಿತು ನೋಟಿಸ್ ನೀಡಿದರೂ ಸಹ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಟಿಕ್ ಟಾಕ್ ನಿಷೇಧ ಮಾಡಲಾಗಿದೆ. ಅಸಂಖ್ಯ ದೂರುಗಳು ಬಂದ ಹಿನ್ನೆಲೆ ಹಾಗೂ ವಿಡಿಯೋ ಕಂಟೆಂಟ್‍ಗಳನ್ನು ಆಧರಿಸಿ ಪಾಕಿಸ್ತಾನ ಹಲವು ಬಾರಿ ನೋಟಿಸ್ ನೀಡತ್ತು. ಅಲ್ಲದೆ ಈ ಹಿಂದೆ ಅಂತಿಮ ನೋಟಿಸ್ ಸಹ ಜಾರಿ ಮಾಡಿತ್ತು. ಆದರೆ ಟಿಕ್ ಟಾಕ್ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂಬ ಕಾರಣವನ್ನು ಪಾಕಿಸ್ತಾನ ನೀಡಿತ್ತು. ಇದನ್ನೂ ಓದಿ: ಟಿಕ್‌ಟಾಕ್ ಬ್ಯಾನ್ – ರಾಕೆಟ್ ವೇಗದಲ್ಲಿ ರೊಪೊಸೊ ಬಳಕೆದಾರರ ಸಂಖ್ಯೆ ಏರಿಕೆ
ಅಮೆರಿಕ, ಭಾರತದಲ್ಲಿ ಬ್ಯಾನ್: ಚೀನಾ ಗಡಿ ಸಂಘರ್ಷದ ಹಿನ್ನೆಲೆ ಭಾರತ ಟಿಕ್‍ಟಾಕ್ ಸೇರಿದಂತೆ ಚೀನಿ ಆ್ಯಪ್ ಗಳನ್ನು ನಿಷೇಧಿಸಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಜನರು ಟಿಕ್‍ಟಾಕ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದರು. ಭಾರತದ ಬಳಿಕ ಅಮೆರಿಕಾ ಸಹ ಟಿಕ್‍ಟಾಕ್ ಬ್ಯಾನ್ ಮಾಡಿತ್ತು. ಇದನ್ನೂ ಓದಿ: ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್