ಟಾಲಿವುಡ್‍ಗೆ ರಿಷಬ್ ಶೆಟ್ಟಿ ಎಂಟ್ರಿ

Public TV
2 Min Read
Rishab shetty

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದು ಮಾತ್ರವಲ್ಲದೇ, ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಲಿ ಮಿಷನ್ ಇಂಪಾಸಿಬಲ್ ಚಿತ್ರದ ಮೂಲಕವಾಗಿ ತೆಲಗು ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆ.

Rishabh Shetty FB 750

ಸ್ವರೂಪ್ ಆರ್‍ಜೆಎಸ್ ನಿರ್ದೇಶನದ ಮಾಡುತ್ತಿರುವ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ತಂಡ ರಿಷಭ್ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟು ಕೊಟ್ಟಿಲ್ಲ. ತೆಲಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ರಿಷಬ್ ಶೆಟ್ಟಿ ಅವರ ಈ ಕ್ಯಾರೆಕ್ಟರ್ ಎಲ್ಲರಿಗೂ ಇಷ್ಟ ಆಗಲಿದೆ ಎಂದಷ್ಟೇ ತಿಳಿಸುವ ಮೂಲಕವಾಗಿ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ನಿಮ್ಮ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಅಧ್ಭುತ, ನಟನೆ ಹಾಗೂ ನಿರ್ದೇಶನದ ಮೂಲಕ ನೀವು ಅನೇಕರಿಗೆ ಸ್ಫೋರ್ತಿಯಾಗಿದ್ದಿರಾ ಎಂದು ಮಿಷನ್ ಇಂಪಾಸಿಬಲ್ ಚಿತ್ರದ ನಿರ್ದೇಶಕ ಸ್ವರೂಪ್ ಆರ್‍ಜೆಎಸ್ ಟ್ವೀಟ್ ಮಾಡಿದ್ದಾರೆ.

Rishab Shetty

ಈ ಟ್ವೀಟ್ ಅನ್ನು ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂದೀಪ್ ರಾಜ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕವಾಗಿ ಕನ್ನಡದ ಬಹುಬೇಡಿಕೆಯ ನಟ, ನಿರ್ದೆಶಕ ರಿಷಬ್ ಶೆಟ್ಟಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ.

ಬೆಲ್ ಬಾಟಂ 2 ಚಿತ್ರದ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಈ ಮೂಲಕವಾಗಿ ಸಿನಿಮಾಗೆ ಕಿಕ್ ಸ್ಟಾರ್ಟ್ ನೀಡಲಾಗಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ ಹಾಗೂ ತಾನ್ಯಾ ಹೋಪ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 80ರ ದಶಕದ ರೆಟ್ರೋ ಶೈಲಿಯಲ್ಲಿಯೇ ಈ ಸಿನಿಮಾ ಮೂಡಿ ಬರಲಿದೆ. ಚಿತ್ರತಂಡ ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೆಲ್ ಬಾಟಂ ಪಾರ್ಟ್ 1 ರಲ್ಲಿ ಬಂಡವಾಳ ಹೂಡಿದ ನಿರ್ಮಾಪಕ ಸಂತೋಷ್ ಕುಮಾರ್ ಬೆಲ್ ಬಾಟಂ 2 ಸಿನಿಮಾಕ್ಕೂ ಬಂಡವಾಳ ಹೂಡಲಿದ್ದಾರೆ. ಬೆಲ್ ಬಾಟಂ 2 ಸಿನಿಮಾ ಪ್ರೇಕ್ಷಕರಿಗೆ ಮತ್ತೆ ಮನರಂಜನೆ ನೀಡಲು ಚಿತ್ರತಂಡ ಮತ್ತೊಮ್ಮೆ ಪರದೆ ಮೇಲೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *