ಕೋಲಾರ: ಇಂದು ಕೋಲಾರ ತಾಲೂಕಿನ ನರಾಸಪುರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ಕಲಿಯುತ್ತಿರುವ 92 ಮಕ್ಕಳಿಗೆ ದಾನಿಗಳ ಸಹಾಯದಿಂದ 46 ಟ್ಯಾಬ್‍ಗಳನ್ನ ವಿತರಣೆ ಮಾಡಲಾಯಿತು. ಟ್ಯಾಬ್ ದಾನಿಗಳಾದ ಚೌಡದೇನಹಳ್ಳಿ ಪುಟ್ಟಯ್ಯ, ನಗರಸಭೆ ಉಪಾಧ್ಯಕ್ಷ ಪ್ರವೀಣ್ ಗೌಡ, ಆಯುಕ್ತ ಶ್ರೀಕಾಂತ್, ಎವಿಜಿ ಗ್ರೂಪ್‍ನ ವಿಶ್ವಾಸ್ ಹಾಗೂ ರೈತ ಮುಖಂಡ ನಾರಾಯಣಗೌಡ ಪಬ್ಲಿಕ್ ಟಿವಿ ಮಹಾಯಜ್ಞಕ್ಕೆ ನೆರವಾಗಿದ್ದರು.
ಆನ್‍ಲೈನ್ ಶಿಕ್ಷಣಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಹಾಗೂ ರೋಟರಿ ಸಹಯೋಗದಲ್ಲಿ ಟ್ಯಾಬ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾ ಸಂಕಷ್ಠದಿಂದ ಕಂಗಾಲಾಗಿದ್ದ ಗ್ರಾಮೀಣ ಭಾಗದ ಎಸ್‍ಎಸ್‍ಎಲ್‍ಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳ ಸಹಾಯದಲ್ಲಿ ಪಬ್ಲಿಕ್ ಟಿವಿ ಮಹಾ ಯಜ್ಞಕ್ಕೆ ಎಲ್ಲೆಡೆ ಉತ್ತಮ ಪ್ರತಿಕೃಯೆ ವ್ಯಕ್ತವಾಗುತ್ತಿದೆ. ಇದಕ್ಕೆ ರಾಜ್ಯದೆಲ್ಲೆಡೆ ಉತ್ತಮ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ನೆರವಾಗುತ್ತಿದೆ.
ಪಬ್ಲಿಕ್ ಟಿವಿ ದಾನಿಗಳ ಅಮೃತ ಹಸ್ತದಿಂದ ವಿದ್ಯಾರ್ಥಿಗಳಿಗೆ ಟ್ಯಾಬ್‍ಗಳನ್ನ ತಲುಪಿಸುವ ಮೂಲಕ ನೆರವಾಗಿದೆ. ತಮ್ಮ ವಿದ್ಯಾಭ್ಯಾಕ್ಕೆ ನೆರವಾದ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆಗೆ ಧನ್ಯವಾದಗಳನ್ನ ಅರ್ಪಿಸುವ ಮೂಲಕ ವಿದ್ಯಾರ್ಥಿಗಳು ಧನ್ಯವಾದಗಳನ್ನ ಅರ್ಪಿಸಿದರು. ಅದರಂತೆ ದಾನಿಗಳು ಕೂಡ ಮಕ್ಕಳಿಗೆ ಟ್ಯಾಬ್‍ಗಳನ್ನ ಕೊಡಿಸಿದ ಖುಷಿ ಸಾರ್ಥಕತೆ ಅವರಲ್ಲಿತ್ತು, ಹಾಗಾಗಿ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನ ಅರ್ಪಿಸಿದರು.