ಹಾವೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಇನ್ಫೋಸಿಸ್ ಪೌಂಡೇಶನ್ ಕೈ ಜೋಡಿಸಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನೀಡಿದ ಟ್ಯಾಬ್‍ಗಳನ್ನು ಇಂದು ಜಿಲ್ಲೆಯ ಶಿಗ್ಗಾಂವ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
Advertisement
ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾವಿರಾರು ದಾನಿಗಳು ಕೈ ಜೋಡಿಸಿದ್ದಾರೆ. ಅದೇ ರೀತಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಣೆ ಅಭಿಯಾನಕ್ಕೆ ಇನ್ಫೋಸಿಸ್ ಫೌಂಡೇಶನ್ ಕೈ ಜೋಡಿಸಿ 500 ವಿದ್ಯಾರ್ಥಿಗಳಿಗೆ ಟ್ಯಾಬ್ ದೇಣಿಗೆ ನೀಡಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ದೇಣಿಗೆ ನೀಡಿದ 250 ಟ್ಯಾಬ್‍ಗಳನ್ನು ಇಂದು ವಿತರಿಸಲಾಯಿತು.
Advertisement
Advertisement
ಸುಧಾಮೂರ್ತಿಯವರ ಹುಟ್ಟೂರು ಶಿಗ್ಗಾಂವ, ಹೀಗಾಗಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂದು ಮೊದಲ ಹಂತದಲ್ಲಿ 91 ಟ್ಯಾಬ್ ವಿತರಣೆ ಮಾಡಲಾಯಿತು. ಶಿಗ್ಗಾಂವ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 50, ಶಿಗ್ಗಾಂವ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 67 ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 64 ಮಕ್ಕಳಿಗೆ ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನಪ್ಪ ವಡಿಗೇರಿ, ಶಿಗ್ಗಾಂವನ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.
Advertisement
ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಡಿಡಿಪಿಐ ಅಂದಾನಪ್ಪ ವಡಿಗೇರ, ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಆಧುನಿತ ತಂತ್ರಜ್ಞಾನದ ಬಳಸಿ ಶಿಕ್ಷಣ ನೀಡಲು ಮುಂದಾಗಿರುವುದು ಶಾಘ್ಲಂನೀಯ. ಈ ಅಭಿಯಾನದ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಸಹಕಾರಿಯಾಗಲಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಉನ್ನತ ಸ್ಥಾನಕ್ಕೆ ಬೆಳೆದರೂ ಹುಟ್ಟೂರು ಮರೆತಿಲ್ಲ. ತಾವು ಹುಟ್ಟಿ ಬೆಳೆದ ಶಿಗ್ಗಾಂವ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ದೇಣಿಗೆ ನೀಡಿದ್ದಾರೆ ಎಂದರು.
ಮಕ್ಕಳಿಗೆ ಟ್ಯಾಬ್ ವಿತರಿಸಿದ ಬಳಿಕ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ಮಾತನಾಡಿ, ಕೋವಿಡ್ ವೇಳೆ ಶಾಲೆಗಳು ಬಂದ್ ಆದಾಗ ಮಕ್ಕಳಿಗೆ ಟ್ಯಾಬ್ ಮೂಲಕ ಸಿದ್ಧ ಪಠ್ಯಪೊರೈಸುವ ಮೂಲಕ ಮಕ್ಕಳು ಮನೆಯಲ್ಲೇ ಕುಳಿತು ಪಾಠ ಕಲಿಯಲು ಟ್ಯಾಬ್ ಅಭಿಯಾನ ಆರಂಭಿಸಿರುವುದು ನಿಜಕ್ಕೂ ಮಹಾಯಜ್ಞವಾಗಿದೆ. ಪಬ್ಲಿಕ್ ಟಿವಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಗ್ಗಾಂವ, ಹಿರೇಮಣಕಟ್ಟಿ, ಹಿರೇಬೆಂಡಿಗೇರಿ ಗ್ರಾಮದ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.