ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್ ಶಿಪ್ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್‍ನ ವೇಗದ ಬೌಲರ್ ಕೈಲ್ ಜೇಮಿಸನ್ ದಾಳಿಗೆ ಭಾರತ ತತ್ತರಿಸಿ 217 ರನ್‍ಗೆ ಆಲೌಟ್ ಆಗಿದೆ. ದಿನದಾಟದ ಅಂತ್ಯಕ್ಕೆ ಕೀವಿಸ್ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ 116ರನ್ ಹಿನ್ನಡೆ ಅನುಭವಿಸಿದೆ.
Advertisement
2ನೇ ದಿನ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಪೇರಿಸಿದ್ದ ಭಾರತ 3ನೇ ದಿನ ಈ ಮೊತ್ತಕ್ಕೆ ಕೇವಲ 71ರನ್ ಸೇರಿಸಿ 7 ವಿಕೆಟ್ ಕಳೆದುಕೊಂಡು 217ರನ್‍ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಜೇಮಿಸನ್ 5 ವಿಕೆಟ್ ಕಿತ್ತು ಭಾರತವನ್ನು ಕಾಡಿದರು. ಇದನ್ನೂ ಓದಿ : ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ
Advertisement
Advertisement
2ನೇ ದಿನದಾಟದ ಅಂತ್ಯಕ್ಕೆ 44 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಆ ಮೊತ್ತಕ್ಕೆ ಒಂದೇ ಒಂದು ರನ್ ಸೇರಿಸಲಾಗದೆ ಜೇಮಿಸನ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಕೇವಲ 4 ರನ್(22 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಉತ್ತಮವಾಗಿ ಅಡುತ್ತಿದ್ದ ಅಜಿಂಕ್ಯ ರಹಾನೆ ಅರ್ಧಶತಕ ಹೊಸ್ತಿಲಲ್ಲಿ ಎಡವಿದರೂ 49ರನ್(117 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಭಾರತಕ್ಕೆ ಮಧ್ಯಮಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನೆರವಾಗಲಿಲ್ಲ.
Advertisement
#TeamIndia are all out for 217 in the first innings of the #WTC21 Final.
New Zealand innings underway.
Live – https://t.co/CmrtWsugSK #INDvNZ #WTC21 pic.twitter.com/lfv9SDNC1z
— BCCI (@BCCI) June 20, 2021
ರವೀಂದ್ರ ಜಡೇಜಾ 15ರನ್(53 ಎಸೆತ, 2 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 22ರನ್(27 ಎಸೆತ,3 ಬೌಂಡರಿ) ಬಾರಿಸಿ ಭಾರತದ ರನ್ 200 ರನ್ ಗಡಿದಾಟುವಂತೆ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಭಾರತ 92.1 ಓವರ್ ಗಳಲ್ಲಿ 217ರನ್‍ಗೆ ಇನ್ನಿಂಗ್ಸ್ ಕೊನೆಗೊಳಿಸಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಮತ್ತು ನೆಲಿ ವ್ಯಾಗ್ನರ್ ತಲಾ 2 ವಿಕೆಟ್ ಕಿತ್ತರೆ, ಟಿಮ್ ಸೌಥಿ 1 ವಿಕೆಟ್ ಪಡೆದರು. ಇದನ್ನೂ ಓದಿ : 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?
ಕೀವಿಸ್ ಎಚ್ಚರಿಕೆಯ ಆರಂಭ:
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಟಾಮ್ ಲೇಥಮ್ ಮತ್ತು ಡೆವೂನ್ ಕಾನ್‍ವೇ ಎಚ್ಚರಿಕೆಯ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 70 ರನ್(206 ಎಸೆತ) ಕಲೆಹಾಕಿತು. ಈ ವೇಳೆ ದಾಳಿಗಿಳಿದ ಅಶ್ವಿನ್ 30ರನ್(104 ಎಸೆತ, 3 ಬೌಂಡರಿ) ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಲೇಥಮ್ ಅವರ ವಿಕೆಟ್ ಪಡೆದರು. ಆ ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆ ಸೇರಿಕೊಂಡ ಕಾನ್‍ವೇ ಅರ್ಧಶತಕ ಬಾರಿಸಿ 54ರನ್(153 ಎಸೆತ, 6ಬೌಂಡರಿ) ಬಾರಿಸಿ ಔಟ್ ಆದರು. ಭಾರತದ ಪರ ಇಶಾಂತ್ ಶರ್ಮಾ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಕೀವಿಸ್ ಪರ ಕೇನ್ ವಿಲಿಯಮ್ಸನ್ 12 ರನ್(37 ಎಸೆತ, 1 ಬೌಂಡರಿ) ಮತ್ತು ರಾಸ್ ಟೇಲರ್ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.