ಜೂ.ಎನ್‍ಟಿಆರ್@30ಗೆ ಕನ್ನಡತಿ ಸಾಥ್!

Public TV
2 Min Read
jr ntr 780x390 1

ಹೈದರಾಬಾದ್: ಟಾಲಿವುಡ್ ತಾರಕ್ ಜೂನಿಯರ್ ಎನ್‍ಟಿಆರ್ ಲಾಕ್‍ಡೌನ್ ನಡುವೆಯೂ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದು, ತೆಲುಗು ಚಿತ್ರರಂಗದಲ್ಲಿ ಸದ್ಯದ ಬ್ಯಸಿಯೆಸ್ಟ್ ನಟರಾಗಿದ್ದಾರೆ. ಇದೀಗ ಮತ್ತೊಂದು ಸಿನಿಮಾದದಲ್ಲಿ ಯಂಗ್ ಟೈಗರ್ ನಟಿಸುವುದು ಖಚಿತವಾಗಿದ್ದು, ಈ ಸಿನಿಮಾದಲ್ಲಿ ಕನ್ನಡದ ನಟಿ ಸಹ ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

nabhanatesh 73387403 146766943338237 4019580219320165851 n

ಜೂನಿಯರ್ ಎನ್‍ಟಿಆರ್ ಲಾಕ್‍ಡೌನ್ ನಡುವೆಯೂ ಹಲವು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದು, ಒಂದೆಡೆ ಸ್ಯಾಂಡಲ್‍ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಜೂನಿಯರ್ ಎನ್‍ಟಿಆರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿದೆ. ಮಾತ್ರವಲ್ಲದೆ ಸದ್ಯ ಎಸ್.ಎಸ್ ರಾಜಮೌಳಿಯವರ ಆರ್‍ಆರ್‍ಆರ್ ಸಿನಿಮಾದಲ್ಲಿ ಸಹ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ 30ನೇ ಸಿನಿಮಾದ ತಯಾರಿ ಸಹ ಭರದಿಂದ ಸಾಗಿದ್ದು, ಹಿರೋಯಿನ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಲಾ ವೈಕುಂಟಪುರಮುಲೋ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ತಾರಕ್‍ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕೆ ಕನ್ನಡದ ನಟಿ ಆಯ್ಕೆಯಾಗುವ ಸಾಧ್ಯತೆ ಇದೆಯಂತೆ.

Junior NTR

ಹೌದು ಜೂನಿಯರ್ ಎನ್‍ಟಿಆರ್ 30ನೇ ಸಿನಿಮಾದಲ್ಲಿ ಸ್ಯಾಂಡಲ್‍ವುಡ್ ನಟಿ ನಭಾ ನಟೇಶ್ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಮೂಲಕ ಭರ್ಜರಿ ಬ್ರೇಕ್ ಪಡೆದಿರುವ ನಭಾಗೆ ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಅವಕಾಶಗಳು ಸಿಗಲು ಆರಂಭಿಸಿವೆ. ಅದೇ ರೀತಿ ಅವರ ಸಂಭಾವನೆ ಕೂಡ ಏರಿಕೆ ಕಂಡಿದೆ. ಇದೀಗ ಎನ್‍ಟಿಆರ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

nabhanatesh 73111775 210290243302620 5577184160746479434 n

ಈ ಸಿನಿಮಾದಲ್ಲಿ ತಾರಕ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ಚಿತ್ರದ ಕುರಿತು ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ನಭಾ ನಟೇಶ್ ಮಾಡಬೇಕಿರುವ ಪಾತ್ರ ಸಹ ತೆಲಂಗಾಣ ಪ್ರಾಂತ್ಯದ ತೆಲುಗು ಭಾಷೆಯನ್ನು ಮಾತನಾಡಲಿದೆಯಂತೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸದ್ಯ ‘ಎನ್‍ಟಿಆರ್ 30’ ಎಂದು ಕರೆಯಲಾಗುತ್ತಿದೆ.

jr ntr

ನಭಾ ನಟೇಶ್ ಸಾಲು ಸಾಲು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಹಲವು ಸಿನಿಮಾಗಳು ಅವರ ಪಟ್ಟಿಯಲ್ಲಿವೆ. ಈ ಮೂಲಕ ಟಾಲಿವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇದೀಗ ಜೂನಿಯರ್ ಎನ್‍ಟಿಆರ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆದರೆ ಟಾಲಿವುಡ್ ಜನಪ್ರಿಯತೆ ಇನ್ನೂ ಹೆಚ್ಚಲಿದೆ.

Share This Article
Leave a Comment

Leave a Reply

Your email address will not be published. Required fields are marked *