ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಿರುವ ಪರಿಣಾಮದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗುತ್ತಿದ್ದು, ಜೂನ್ 7ರ ನಂತರ ಜಿಲ್ಲೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುವುದು ಬೇಡ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಸೋಂಕಿನ ಪ್ರಕರಣಗಳು ಕಂಟ್ರೋಲ್ ಗೆ ಬಂದಿದೆ. ಈ ಮೊದಲು ಪ್ರತಿ ದಿನ 800, 900 ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇದೀಗ 200ರ ಆಸುಪಾಸಿನಲ್ಲಿ ಬರುತ್ತಿವೆ. ಇನ್ನೊಂದು ವಾರದಲ್ಲಿ ಸಂಪೂರ್ಣವಾಗಿ ಕಡಿಮೆಯಾಗುವ ನಂಬಿಕೆ ಇದೆ. ಜೂನ್ 7ರ ನಂತರ ಪರಿಸ್ಥಿತಿ ಅನುಗುಣವಾಗಿ ಲಾಕ್‍ಡೌನ್ ವಿಸ್ತರಣೆ ಮಾಡಬೇಕೇ, ಬೇಡವೇ ಎಂದು ತೀರ್ಮಾನಿಸುತ್ತೇವೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಗದು, ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ಅವರು, ಈಗಾಗಲೇ ಅಸ್ಪತ್ರೆಯಲ್ಲಿ ಸಾಕಷ್ಟು ಟೈಟ್ ಮಾಡುವ ವ್ಯವಸ್ಥೆಗಳು ಅಗಿದೆ. ಸೇಫ್ ಲಾಕರ್ ಇಡುವಂತೆ ಸಹ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೆ ಓರ್ವ ಅರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಕಳವು ಪ್ರಕರಣಕ್ಕೆ ತೆರೆ ಬೀಳುತ್ತದೆ ಎಂದು ಅಪ್ಪಚು ರಂಜನ್ ತಿಳಿಸಿದರು.