– ಜೀನ್ಸ್ ಹಾಕಿದ್ರೆ ಡಿವೋರ್ಸ್ ಅಂದ ಗಂಡ
ಗಾಂಧೀನಗರ: ಜೀನ್ಸ್ ತೊಡಬೇಡ ಎಂದ ಪತಿ ವಿರುದ್ಧ ಮಹಿಳೆ ದೂರು ದಾಖಲಿಸಿರುವ ಘಟನೆ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ವೆಜಲ್‍ಪುರ ನಲ್ಲಿ ನಡೆದಿದೆ. ಪತಿ ಹಾಗೂ ಆತನ ಕುಟುಂಬಸ್ಥರು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ದೂರು ದಾಖಲಿಸಿರುವ 37 ವರ್ಷದ ಮಹಿಳೆ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಮದುವೆ ಬಳಿಕ ಜೀನ್ಸ್ ಧರಿಸಿ ಕೆಲಸಕ್ಕೆ ಹೊರಟರೆ ಕುಟುಂಬಸ್ಥರು ವಿಚ್ಛೇಧನ ನೀಡುವ ಕುರಿತು ಮಾತನಾಡುತ್ತಾರೆ. ಜೀನ್ಸ್ ಧರಿಸುವ ಮಹಿಳೆಯರನ್ನ ನಿಂದಿಸುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆಗೆ ಇದು ಎರಡನೇ ಮದುವೆಯಾಗಿದ್ದು, ಪತಿಗೆ ಮೂರನೇ ಮದುವೆ. ವಿವಾಹಕ್ಕೂ ಮೊದಲೇ ಕುಟುಂಬದಿಂದ ದೂರ ಇಬ್ಬರೇ ವಾಸಿಸುವ ಬಗ್ಗೆ ಷರತ್ತು ವಿಧಿಸಿದ್ದರು. ಆರಂಭದ ಎರಡು ವರ್ಷ ಇಬ್ಬರು ಚೆನ್ನಾಗಿದ್ದರು. ನಂತರ ಪತಿ ಕುಟುಂಬದ ಜೊತೆ ವಾಸಿಸುವುದು ಮತ್ತು ತಾನು ಹೇಳಿದ ಬಟ್ಟೆ ಧರಿಸುವಂತೆ ಒತ್ತಡ ಹಾಕಲರಂಭಿಸಿದ್ದಾನೆ.
ಮಹಿಳೆ ಒಪ್ಪದಿದ್ದಾಗ ವಿಚ್ಛೇಧನ ನೀಡುವ ಬಗ್ಗೆ ಧಮ್ಕಿ ಸಹ ಹಾಕಿದ್ದಾನೆ. ಇದರಿಂದ ನೊಂದ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.